ಬಳ್ಳಾರಿ, 09 ಜುಲೈ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್ ಪ್ರೆಸ್ (17391/17392) ರೈಲುಗಳನ್ನು ಈಗ ಸಿಂಧನೂರಿನವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಈ ನಿರ್ಧಾರದಿಂದ ಸಿಂಧನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಉತ್ತಮ ರೈಲು ಸಂಪರ್ಕ ಲಭ್ಯವಾಗಲಿದೆ.
ಪ್ರಸ್ತುತ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಕೆಎಸ್ಆರ್ ಬೆಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 17392, ಜುಲೈ 12, 2025 ರಿಂದ ಸಿಂಧನೂರಿನಿಂದ ತನ್ನ ಸಂಚಾರವನ್ನು ಆರಂಭಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ ಪ್ರೆಸ್ ರೈಲು ಜುಲೈ 13, 2025 ರಿಂದ ಸಿಂಧನೂರು ವರೆಗೆ ವಿಸ್ತರಿಸಲಾಗುವುದು. ಕೆಎಸ್ಆರ್ ಬೆಂಗಳೂರು ಮತ್ತು ಕುಂದಗೋಳ ನಿಲ್ದಾಣಗಳ ನಡುವಿನ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಸಿಂಧನೂರು ನಡುವಿನ ವಿಸ್ತೃತ ಭಾಗದಲ್ಲಿ ರೈಲು ಸಂಖ್ಯೆ 17391/17392ರ ಸಮಯ ಮತ್ತು ನಿಲುಗಡೆಗಳು ಈ ಕೆಳಗಿನಂತಿವೆ: ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು - ಸಿಂಧನೂರು ದೈನಂದಿನ ಎಕ್ಸ್ ಪ್ರೆಸ್ ರೈಲು, ಎಸ್ಎಸ್ಎಸ್ ಹುಬ್ಬಳ್ಳಿಗೆ 09:20 ಗಂಟೆಗೆ ಆಗಮಿಸಿ, 09:30 ಗಂಟೆಗೆ ಹೊರಡುತ್ತದೆ. ಇದು ಶಿಶ್ವಿನಹಳ್ಳಿ (09:51/09:52 ಗಂಟೆ), ಅಣ್ಣಿಗೇರಿ (10:04/10:05 ಗಂಟೆ), ಗದಗ (10:33/10:35 ಗಂಟೆ), ತಳಕಲ್ (11:09/11:10 ಗಂಟೆ), ಭಾಣಾಪುರ (11:15/11:16 ಗಂಟೆ), ಕೊಪ್ಪಳ (11:33/11:35 ಗಂಟೆ), ಗಿಣಿಗೇರಾ (11:46/11:47 ಗಂಟೆ), ಗಂಗಾವತಿ (12:52/12:53 ಗಂಟೆ), ಸಿದ್ಧಾಪುರ ಗ್ರಾಮ (13:15/13:16 ಗಂಟೆ), ಕಾರಟಗಿ (13:34/13:35 ಗಂಟೆ), ಗೋರೆಬಾಳ (13:44/13:45 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆಗೊಂಡು, ಸಿಂಧನೂರನ್ನು 14:20 ಗಂಟೆಗೆ ತಲುಪುತ್ತದೆ.
ರೈಲು ಸಂಖ್ಯೆ 17392 ಸಿಂಧನೂರು - ಕೆಎಸ್ಆರ್ ಬೆಂಗಳೂರು ದೈನಂದಿನ ಎಕ್ಸ್ ಪ್ರೆಸ್, ಸಿಂಧನೂರಿನಿಂದ 13:30 ಗಂಟೆಗೆ ಹೊರಡುತ್ತದೆ. ಈ ರೈಲು ಗೋರೆಬಾಳ (13:38/13:39 ಗಂಟೆ), ಕಾರಟಗಿ (13:49/13:50 ಗಂಟೆ), ಸಿದ್ಧಾಪುರ ಗ್ರಾಮ (14:07/14:08 ಗಂಟೆ), ಗಂಗಾವತಿ (14:26/14:27 ಗಂಟೆ), ಗಿಣಿಗೇರಾ (15:29/15:30 ಗಂಟೆ), ಕೊಪ್ಪಳ (15:43/15:45 ಗಂಟೆ), ಭಾಣಾಪುರ (15:54/15:55 ಗಂಟೆ), ತಳಕಲ್ (15:59/16:00 ಗಂಟೆ), ಗದಗ (16:40/16:42 ಗಂಟೆ), ಅಣ್ಣಿಗೇರಿ (17:04/17:05 ಗಂಟೆ), ಶಿಶ್ವಿನಹಳ್ಳಿ (17:15/17:16 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆಗೊಂಡು, ಎಸ್ಎಸ್ಎಸ್ ಹುಬ್ಬಳ್ಳಿಗೆ 18:10 ಗಂಟೆಗೆ ಆಗಮಿಸಿ, 18:45 ಗಂಟೆಗೆ ಕೆಎಸ್ಆರ್ ಬೆಂಗಳೂರು ಕಡೆಗೆ ಹೊರಡುತ್ತದೆ.
• ರೈಲು ಸಂಖ್ಯೆ 56927/56928 ಎಸ್ಎಸ್ಎಸ್ ಹುಬ್ಬಳ್ಳಿ – ಸಿಂಧನೂರು – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ:
ಸಿಂಧನೂರು ವರೆಗೆ ಸೇವೆಗಳನ್ನು ವಿಸ್ತರಿಸಿದ ಹಿನ್ನಲೆಯಲ್ಲಿ, ರೈಲು ಸಂಖ್ಯೆ 56927/56928 ಎಸ್ಎಸ್ಎಸ್ ಹುಬ್ಬಳ್ಳಿ – ಸಿಂಧನೂರು – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಪರಿಷ್ಕೃತ ಸಮಯಗಳು ರೈಲು ಸಂಖ್ಯೆ 56927ಕ್ಕೆ ಜುಲೈ 12ರಿಂದ ಮತ್ತು ರೈಲು ಸಂಖ್ಯೆ 56928ಕ್ಕೆ ಜುಲೈ 13, 2025 ರಿಂದ ಜಾರಿಗೆ ಬರಲಿವೆ.
ಅದರಂತೆ, ರೈಲು ಸಂಖ್ಯೆ 56927 ಎಸ್ಎಸ್ಎಸ್ ಹುಬ್ಬಳ್ಳಿ – ಸಿಂಧನೂರು ದೈನಂದಿನ ಪ್ಯಾಸೆಂಜರ್ ರೈಲು, ಈಗ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 07:15ಕ್ಕೆ ಹೊರಟು ಸಿಂಧನೂರನ್ನು ಮಧ್ಯಾಹ್ನ 12:15ಕ್ಕೆ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ಆಗಮಿಸುವ/ಹೊರಡುವ ಸಮಯಗಳು ಹೀಗಿವೆ: ಶಿಶ್ವಿನಹಳ್ಳಿ- 07:40/07:41 ಗಂಟೆ, ಅಣ್ಣಿಗೇರಿ - 07:53/07:54 ಗಂಟೆ, ಹುಲಕೋಟಿ - 08:03/08:04 ಗಂಟೆ, ಗದಗ - 08:20/08:22 ಗಂಟೆ, ಹರ್ಲಾಪುರ - 08:41/08:42 ಗಂಟೆ, ಹಳ್ಳಿಗುಡಿ ಹಾಲ್ಟ್ - 08:46/08:47 ಗಂಟೆ, ಬನ್ನಿಕೊಪ್ಪ - 08:59/09:00 ಗಂಟೆ, ಭಾಣಾಪುರ - 09:04/09:05 ಗಂಟೆ, ಕೊಪ್ಪಳ - 09:25/09:27 ಗಂಟೆ, ಗಿಣಿಗೇರಾ - 09:42/09:43 ಗಂಟೆ, ಬೂದಗುoಪ - 09:57/09:58 ಗಂಟೆ, ಜಬ್ಬಲಗುಡ್ಡ - 10:09/10:10 ಗಂಟೆ, ಚಿಕ್ಕಬೆನಕಲ್ - 10:26/10:27 ಗಂಟೆ, ಗಂಗಾವತಿ - 10:44/10:45 ಗಂಟೆ, ಶ್ರೀರಾಮನಗರ ಗ್ರಾಮ ಹಾಲ್ಟ್ - 10:55/10:56 ಗಂಟೆ, ಸಿದ್ಧಾಪುರ ಗ್ರಾಮ - 11:02/11:03 ಗಂಟೆ, ಕಾರಟಗಿ - 11:20/11:22 ಗಂಟೆ, & ಗೊರೆಬಾಳ - 11:35/11:36 ಗಂಟೆ.
ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 56928 ಸಿಂಧನೂರು – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲು, ಈಗ ಸಿಂಧನೂರಿನಿಂದ ಮಧ್ಯಾಹ್ನ 15:00ಕ್ಕೆ ಹೊರಟು, ಎಸ್ಎಸ್ಎಸ್ ಹುಬ್ಬಳ್ಳಿಯನ್ನು ಸಂಜೆ 19:55ಕ್ಕೆ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ಆಗಮಿಸುವ/ಹೊರಡುವ ಸಮಯಗಳು ಹೀಗಿವೆ: ಗೊರೆಬಾಳ-15:09/15:10 ಗಂಟೆ, ಕಾರಟಗಿ-15:23/15:25 ಗಂಟೆ, ಸಿದ್ಧಾಪುರ ಗ್ರಾಮ- 15:39/15:40 ಗಂಟೆ, ಶ್ರೀರಾಮನಗರ ಗ್ರಾಮ ಹಾಲ್ಟ್-15:47/15:48 ಗಂಟೆ, ಗಂಗಾವತಿ-16:00/16:01 ಗಂಟೆ, ಚಿಕ್ಕಬೆನಕಲ್-16:18/16:19 ಗಂಟೆ, ಜಬ್ಬಲಗುಡ್ಡ-16:31/16:32 ಗಂಟೆ, ಬೂದಗುoಪ-16:46/16:47 ಗಂಟೆ, ಗಿಣಿಗೇರಾ-17:01/17:02 ಗಂಟೆ, ಕೊಪ್ಪಳ-17:12/17:13 ಗಂಟೆ, ಭಾಣಾಪುರ-17:24/17:25 ಗಂಟೆ, ಬನ್ನಿ ಕೊಪ್ಪ-17:34/17:35 ಗಂಟೆ, ಹಳ್ಳಿಗುಡಿ ಹಾಲ್ಟ್- 17:43/17:44 ಗಂಟೆ, ಹರ್ಲಾಪುರ-17:47/17:48 ಗಂಟೆ, ಗದಗ-18:08/18:10 ಗಂಟೆ, ಹುಲಕೋಟಿ-18:26/18:27 ಗಂಟೆ, ಅಣ್ಣಿಗೇರಿ-18:35/18:36 ಗಂಟೆ, ಶಿಶ್ವಿನಹಳ್ಳಿ- 18:49/18:50 ಗಂಟೆ, ನಂತರ 19:55 ಗಂಟೆಗೆ ಹುಬ್ಬಳ್ಳಿ ತಲುಪುತ್ತದೆ.
• ಎಸ್‌ಎಸ್‌ಎಸ್ ಹುಬ್ಬಳ್ಳಿ–ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸೇವೆಗಳ (ರೈಲು ಸಂಖ್ಯೆ 07329/07330) ಆವರ್ತನ ಮತ್ತು ಸಂಯೋಜನೆಯಲ್ಲಿ ಬದಲಾವಣೆ:
ಇದಲ್ಲದೆ, ರೈಲು ಸಂಖ್ಯೆ 07329/07330 ಎಸ್ಎಸ್ಎಸ್ ಹುಬ್ಬಳ್ಳಿ - ವಿಜಯಪುರ - ಎಸ್ಎಸ್ಎಸ್ ಹುಬ್ಬಳ್ಳಿ ಇಂಟರ್ಸಿಟಿ ಎಕ್ಸ್ಪ್ರೆಸ್ನ ಆವರ್ತನ ಮತ್ತು ಬೋಗಿ ಸಂಯೋಜನೆಯನ್ನು ಸಹ ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 07329 ಎಸ್ಎಸ್ಎಸ್ ಹುಬ್ಬಳ್ಳಿ – ವಿಜಯಪುರ ಪ್ಯಾಸೆಂಜರ್, ಇದು ಮೊದಲು ದೈನಂದಿನವಾಗಿ ಕಾರ್ಯನಿರ್ವಹಿಸುತ್ತಿತ್ತು, ಈಗ ಶನಿವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ, ಅದೇ ರೀತಿ, ರೈಲು ಸಂಖ್ಯೆ 07330 ವಿಜಯಪುರ – ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಈಗ ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸಲಿದೆ.
ಪರಿಷ್ಕೃತ ರೇಕ್ ಸಂಯೋಜನೆಯು ಅಸ್ತಿತ್ವದಲ್ಲಿರುವ 11 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು 2 ಎಸ್ಎಲ್ಆರ್ಡಿ ಬೋಗಿಗಳ ಬದಲಿಗೆ 8 ಡೆಮು ಬೋಗಿಗಳನ್ನು ಒಳಗೊಂಡಿರುತ್ತದೆ. ಈ ಬದಲಾವಣೆಗಳು ಜುಲೈ 09, 2025 ರಿಂದ ರೈಲು ಸಂಖ್ಯೆ 07329ಕ್ಕೆ ಮತ್ತು ಜುಲೈ 10, 2025 ರಿಂದ ರೈಲು ಸಂಖ್ಯೆ 07330ಕ್ಕೆ ಜಾರಿಗೆ ಬರಲಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್