ಬಳ್ಳಾರಿ, 09 ಜುಲೈ (ಹಿ.ಸ.) :
ಆ್ಯಂಕರ್ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೀಜಿನಲ್ ಮತ್ತು ಪ್ರಭುದ್ಧ ರಾಜಕಾರಣಿ ಅವರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೋದೇ ಇಲ್ಲ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅವರು ಹೇಳಿದ್ದಾರೆ.
ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ ಅವರು ಡಿಕೆಶಿ ಮುಖ್ಯಮಂತ್ರಿ ಕುರ್ಚಿಗಾಗಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಹೆಣೆಗಾಡುತ್ತಿದ್ದಾರೆ ಎಂದರು.
ರಾಜ್ಯ ಉಸ್ತುವಾರಿ ಸೃಜವಾಲ ಅವರು ಕಳೆದ ವಾರ ಎರಡು ಬಾರಿ ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ ಸಿಎಂ ಬದಲಾವಣೆಯ ಕೂಗು ಜೋರಾಗುತ್ತಿದ್ದಂತೆ ರಾಜ್ಯ ರಾಜಕಾರಣಕ್ಕೆ ತೇಪೆ ಹಚ್ಚಿ ಹೋಗಿದ್ದಾರೆ, ಯಾವುದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಬಹುದು ಎಂದು ತಿಳಿಸಿದ ರಾಮುಲು ಇದು ನನ್ನ ಭವಿಷ್ಯವಲ್ಲ ಇದು ಕಟು ವಾಸ್ತವ ಎಂದು ಹೇಳಿದರು.
ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿ ಡಿಕೆ ಶಿವಕುಮಾರ್ ಅವರನ್ನು ಹಿಂದಿಕ್ಕುವ ಉನ್ನಾರ ನಡೆದಿದೆ, ದಲಿತ ಮುಖ್ಯಮಂತ್ರಿ ಆಗಲು ನಮ್ಮ ಯಾವುದೇ ಅಭ್ಯಂತರವಿಲ್ಲ ಆದರೆ ಕುರ್ಚಿಯ ಕಚ್ಚಾಟದಲ್ಲಿ ರಾಜ್ಯದ ಜನತೆಗೆ ಅನ್ಯಾಯ ಮಾಡಬಾರದು ಎಂದರು.
ರಾಜ್ಯದ 10 ಮಹಾನಗರ ಪಾಲಿಕೆ ನೌಕರರಿಗೆ ಸಂಬಳ ನೀಡಲು ಸಹ ಸರ್ಕಾರದಲ್ಲಿ ಹಣವಿಲ್ಲ ಇದರಿಂದಾಗಿ ಪಾಲಿಕೆ ನೌಕರರು ಕಳೆದ ಎರಡು ದಿನಗಳಿಂದ ಮುಷ್ಕರವನ್ನು ಹೂಡಿದ್ದಾರೆ ಸರ್ಕಾರದ ಎಲ್ಲಾ ಇಲಾಖೆಗಳು ದಿವಾಳಿಯಾಗಿವೆ, ಸರ್ಕಾರ ನಡೆಸಲು ಸಾಧ್ಯವಾಗದಿದ್ದಲ್ಲಿ ಕೂಡಲೇ ರಾಜೀನಾಮೆ ಕೊಡಿ ನಾವು ಚುನಾವಣೆಗೆ ರೆಡಿ ಎಂದು ರಾಮುಲು ಅವರು ಹೇಳಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ವೀರಶೇಖರ ರೆಡ್ಡಿ, ಓಬಳೇಶ್, ವೇಮಣ್ಣ, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಕೆ ಹನುಮಂತಪ್ಪ, ಗುಡಿಗಂಟೆ ಹನುಮಂತಪ್ಪ, ವೆಂಕಟರೆಡ್ಡಿ ನಾರಾಯಣಸ್ವಾಮಿ ಸೇರಿದಂತೆ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್