ಪಾಟ್ನಾ, 09 ಜುಲೈ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ಮತದಾರರ ಪರಿಷ್ಕರಣೆ ಹಾಗೂ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲವಾಗಿ ಇಂಡಿ ಮೈತ್ರಿಕೂಟವು ಬಿಹಾರ ಬಂದ್‌ಗೆ ಕರೆ ನೀಡಿದ್ದು, ರೈಲು ಮತ್ತು ರಸ್ತೆ ಸಂಚಾರದ ಮೇಲೆ ಪರಿಣಾಮ ಬೀರಿದೆ. ಪಾಟ್ನಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ತೇಜಸ್ವಿ ಯಾದವ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸಂವಿಧಾನ ಪುಸ್ತಕ ಹಿಡಿದು ಮಾತನಾಡಿದ ರಾಹುಲ್ ಗಾಂಧಿ, “ಮಹಾರಾಷ್ಟ್ರದಲ್ಲಿ ಚುನಾವಣೆ ಮತಗಳನ್ನು ಕದ್ದಿದ್ದಾರೆ. ಈಗ ಬಿಹಾರದಲ್ಲೂ ಮತಗಳನ್ನು ಕದಿಯಲು ಯತ್ನ ನಡೆಯುತ್ತಿದೆ. ಇದು ಬಡವರ ಹಕ್ಕು ಕಸಿಯುವ ಶಡ್ಯಂತ್ರ” ಎಂದು ಆರೋಪಿಸಿದರು.
ಚುನಾವಣಾ ಆಯೋಗದ ಭೂಮಿಕೆಯನ್ನು ಪ್ರಶ್ನಿಸಿದ ಅವರು, ನೀವೆಷ್ಟು ದೊಡ್ಡವರಾದರೂ, ಕಾನೂನು ನಿಮ್ಮನ್ನು ಬಿಡದು. ಸಂವಿಧಾನ ರಕ್ಷಿಸುವುದು ನಿಮ್ಮ ಕರ್ತವ್ಯ ಎಂದು ಎಚ್ಚರಿಸಿದರು. ಚುನಾವಣಾ ಆಯುಕ್ತರು ರಾಜಕೀಯ ಪಕ್ಷದ ನಿಲುವಿಗೆ ಇಳಿದುಕೊಳ್ಳುತ್ತಿದ್ದಾರೆಯೆಂದು ಗಂಭೀರ ಆರೋಪವನ್ನು ರಾಹುಲ್ ಮಾಡಿದರು.
ಈ ಮೆರವಣಿಗೆಯಲ್ಲಿ ತೇಜಸ್ವಿ ಯಾದವ್, ದೀಪಂಕರ್ ಭಟ್ಟಾಚಾರ್ಯ, ಮುಖೇಶ್ ಸಾಹ್ನಿ ಸೇರಿದಂತೆ ಮಹಾಘಟಬಂಧನ್ ನಾಯಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa