ರಾಯಚೂರು, 09 ಜುಲೈ (ಹಿ.ಸ.) :
ಆ್ಯಂಕರ್ : ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಗೆ ಅವಶ್ಯವಿರುವ ಪಾಲಿಸಿ ಕನ್ಸಲ್ಟೆಂಟ್ Policy Consultant)- - 01 ಹುದ್ದೆಯನ್ನು ಒಳಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು, ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಮಾಸ್ಟರ್ ಡಿಗ್ರಿ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ) ಅಥವಾ ಮಾಸ್ಟರ್ ಇನ್ ಪಬ್ಲಿಕ್ ಪಾಲಿಸಿ (ಎಂಪಿಪಿ) ವಿದ್ಯಾರ್ಹತೆ ಹೊಂದಿರಬೇಕು.
ಸಂಶೋಧನೆ ಮತ್ತು ನೀತಿ ವಿಶ್ಲೇಷಣೆಯಲ್ಲಿ ಕನಿಷ್ಠ 2 ವರ್ಷಗಳ ಅನುಭವ, ಸರ್ಕಾರಿ ಸಂಸ್ಥೆಗಳೊಂದಿಗೆ ಸಮನ್ವಯದಲ್ಲಿ ಕೆಲಸದ ಜ್ಞಾನ ಮತ್ತು ಅನುಭವ ಹೊಂದಿರಬೇಕು. ಡೇಟಾ ವಿಶ್ಲೇಷಣಾ ಸಾಫ್ಟ್‍ವೇರ್‍ನ ಜ್ಞಾನವು ಹೊಂದಿರಬೇಕು.
ಜಿಲ್ಲಾಧಿಕಾರಿಗಳು ರಾಯಚೂರ ಇವರಿಂದ ಅಭ್ಯರ್ಥಿಯ ಕಾರ್ಯಕ್ಷಮತೆ ತೃಪ್ತಿಕರವಾಗಿ ಪೂರೈಸಿದ್ದಾರೆಂದು ಘೋಷಿಸಿದಲ್ಲಿ ಮಾತ್ರ ಮುಂದಿನ ವರ್ಷಕ್ಕೆ ಅಭ್ಯರ್ಥಿಯನ್ನು ಮುಂದುವರೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 50 ಸಾವಿರ ರೂ.ಗಳನ್ನು ವೇತನವನ್ನು ನೀಡಲಾಗುವುದು.
ಅಭ್ಯರ್ಥಿಗಳು ಅರ್ಜಿಯನ್ನು ಜಾಲತಾಣ ವಿಳಾಸ: https://raichur.nic.in ನಲ್ಲಿ ಪಡೆದು ಜುಲೈ 17ರ ಸಂಜೆ 5.30 ರೊಳಗಾಗಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಡಳಿತ ಕಟ್ಟಡ, ನೆಲ ಮಹಡಿ, ಕೊಠಡಿ ಸಂಖ್ಯೆ-ಸಿ-15, ಯಕಲಾಸ್‍ಪುರ, ರಾಯಚೂರು-584101 ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್