ನವದೆಹಲಿ, 08 ಜುಲೈ (ಹಿ.ಸ.) :
ಆ್ಯಂಕರ್ : ಡಿಪಿಎಲ್ (ದೆಹಲಿ ಪ್ರೀಮಿಯರ್ ಲೀಗ್) ಮಹಿಳಾ ಸೀಸನ್-2ಕ್ಕೆ ಸಂಬಂಧಿಸಿದಂತೆ, ಸೆಂಟ್ರಲ್ ದೆಹಲಿ ಕ್ವೀನ್ಸ್, ನಾರ್ತ್ ದೆಹಲಿ ಸ್ಟ್ರೈಕರ್ಸ್, ಈಸ್ಟ್ ದೆಹಲಿ ರೈಡರ್ಸ್, ಮತ್ತು ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡಗಳು ತಮ್ಮ ಆಟಗಾರ್ತಿಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿವೆ. ಈ ಬಾರಿ ಯುವ ಪ್ರತಿಭೆಗಳ ಜೊತೆಗೆ ಅನುಭವಿ ಆಟಗಾರ್ತಿಯರ ಸಂಯೋಜನೆ ಗಮನಸೆಳೆದಿದೆ.
ಹರಾಜು ಪ್ರಕ್ರಿಯೆಯಲ್ಲಿ ತನಿಶಾ ಸಿಂಗ್ ರವರಿಗೆ ₹13 ಲಕ್ಷ, ನಜ್ಮಾಗೆ ₹12.5 ಲಕ್ಷ, ಮೋನಿಕಾಗೆ ₹10 ಲಕ್ಷ ಮತ್ತು ಪೂರ್ವಾ ಸಿವಾಚ್ಗೆ ₹9.75 ಲಕ್ಷದ ಬೃಹತ್ ಬಿಡ್ ಲಭ್ಯವಾಯಿತು. ಈ ಹೂಡಿಕೆಯಿಂದ ತಂಡಗಳು ಭವಿಷ್ಯದ ತಾರೆಗಳನ್ನು ಬೆಳೆಸುವ ಗುರಿ ಹೊಂದಿವೆ.
ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಮಾತನಾಡಿ, “ಡಿಪಿಎಲ್ ಮಹಿಳಾ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಈ ಬಾರಿ ಹೆಚ್ಚು ಭಾಗವಹಿಸುವಿಕೆ ಕಂಡುಬಂದಿದ್ದು, ಇತ್ತೀಚಿನ ಕ್ಲಬ್ ಮಟ್ಟದ ಪಂದ್ಯಾವಳಿಯಲ್ಲಿ 600ಕ್ಕೂ ಹೆಚ್ಚು ಯುವತಿಯರು ಭಾಗವಹಿಸಿದ್ದಾರೆ. ಇದೊಂದು ಮಹಿಳಾ ಕ್ರಿಕೆಟ್‌ಗೆ ಹೆಮ್ಮೆಯ ವಿಷಯ. ಭವಿಷ್ಯದಲ್ಲಿ ಇನ್ನಷ್ಟು ತಂಡಗಳು ಮತ್ತು ಪಂದ್ಯಗಳನ್ನು ಸೇರಿಸಲು ಉದ್ದೇಶಿಸಿದ್ದೇವೆ,” ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa