ಸಾರ್ವಜನಿಕವಾಗಿ ಕಾಣಿಸಿಕೊಂಡ ಖಮೇನಿ
ಟೆಹ್ರಾನ್, 06 ಜುಲೈ (ಹಿ.ಸ.) : ಆ್ಯಂಕರ್ : ಇಸ್ರೇಲ್ ವಿರುದ್ಧದ 12 ದಿನಗಳ ಸೈನಿಕ ಸಂಘರ್ಷದ ನಂತರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಜುಲೈ 5ರಂದು ಟೆಹ್ರಾನ್‌ನಲ್ಲಿ ನಡೆದ ಮೊಹರಂ ಶೋಕಾಚರಣೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಜೂನ್ 13ರಿಂದ ಇಸ್ರೇಲ್ ಇರಾನ್ ಮೇಲೆ ನ
Khameni


ಟೆಹ್ರಾನ್, 06 ಜುಲೈ (ಹಿ.ಸ.) :

ಆ್ಯಂಕರ್ : ಇಸ್ರೇಲ್ ವಿರುದ್ಧದ 12 ದಿನಗಳ ಸೈನಿಕ ಸಂಘರ್ಷದ ನಂತರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಜುಲೈ 5ರಂದು ಟೆಹ್ರಾನ್‌ನಲ್ಲಿ ನಡೆದ ಮೊಹರಂ ಶೋಕಾಚರಣೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಜೂನ್ 13ರಿಂದ ಇಸ್ರೇಲ್ ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿದ್ದು, ಹಲವಾರು ಉನ್ನತ ಸೇನಾಧಿಕಾರಿಗಳು ಹಾಗೂ ಪರಮಾಣು ವಿಜ್ಞಾನಿಗಳು ಹತರಾಗಿದ್ದರು. ಈ ಹಿನ್ನೆಲೆಯಲ್ಲಿ ಖಮೇನಿ ಅವರು ಬಂಕರ್‌ನಲ್ಲಿ ಅಡಗಿದ್ದರೆ ಎಂಬ ಊಹೆಗಳು ನಡೆದಿದ್ದವು.

ಅಮೆರಿಕದ ಬೆಂಬಲದಿಂದ ಇಸ್ರೇಲ್ ಹಲವಾರು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ, ಇರಾನ್ ಇಸ್ರೇಲ್ ಮೇಲೆ 550 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿ ಪ್ರತಿಕ್ರಿಯೆ ನೀಡಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande