ಗದಗ, 05 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದ ವಾಲ್ಮೀಕಿ ಸಮಾಜ ಬಾಂಧವರು ಹಾಗೂ ಉಪ್ಪಾರ ಸಮಾಜದ ಕಲ್ಲಪ್ಪನವರ ಕುಟುಂಬ ಹಾಗೂ ಅಯ್ಯಪ್ಪನವರ ಕುಟುಂಬ,ಮಕಾಂದಾರ ಕುಟುಂಬವರ್ಗದವರು ಒಗ್ಗಟ್ಟಾಗಿ ಬಂದು ಕತ್ತಲರಾತ್ರಿಯ ನಿಮಿತ್ಯವಾಗಿ ಮಕ್ತುಂಪೂರ ಗ್ರಾಮದಿಂದ ಮುಂಡರಗಿ ಪಟ್ಟಣಕ್ಕೆ ಬರಿಗಾಲಿನಿಂದ ಪಾದಯಾತ್ರೆಯ ಮುಖಾಂತರ ಮುಂಡರಗಿ ಪಟ್ಟಣಕ್ಕೆ ಬರುವುದು ವಿಷೇಶವಾಗಿದೆ
ನಂತರ ಎಲ್ಲರೂ ಒಗ್ಗೂಡಿ ಮಡಿಕೆಯನ್ನು ಖರೀದಿಸುವುದು ವಿಶೇಷವಾಗಿತ್ತು
ಇಂದು ಖರೀದಿಸಿದ ಹೊಸ ಮಡಿಕೆಯಲ್ಲಿ ಜೊಳದ ಕಿಚಡಿ ಹಾಗೂ ಶರಬತ್ತನ್ನು ತಯಾರಿಸಿ ರಾತ್ರಿ ಸಮಾಜ ಭಾಂದವರು ಕೂಡಿಕೊಂಡು ಅಲೈದೇವರಿಗೆ ದೀಡ ನಮಾಸ್ಕಾರ ಹಾಕುವದರೊಂದಿಗೆ ಮಕನಾ ಹೂವು ಸಕ್ಕರೆ ಹಾಲು ಇತರೆ ನೈವೇದ್ಯ ಅರ್ಪಿಸುವುದು ಹಿಂದಿನಿಂದ ಕಾಲದ ಬಂದ ಪ್ರತೀತಿಯಾಗಿದೆ.
ಇನ್ನೊಂದು ವಿಶೇಷವೆಂದರೆ ಈ ಹೊಸ ಮಡಿಕೆಯಲ್ಲಿ ಜೋಳದ ಕಿಚಡಿಯನ್ನು ತಯಾರಿಸಲು ಒಲೆಯನ್ನು ಹಚ್ಚಿದಾಗ ಜೋಳದ ಕಿಚಡಿ ಆಗುವವರೆಗೂ ಹಚ್ಚಿದ ಓಲೆಯು ಆರುವುದೇ ಇಲ್ಲ ಹಾಗೂ ಕಿಚಡಿ ಆಗುವವರೆಗೂ ಒಲೆಯನ್ನು ಸಹ ಊದುವುದಿಲ್ಲ ಅಂತಹ ವಿಶೇಷತೆ ಇಂದು ಕಾಣಬಹುದು. ಇಂದು ಕತ್ತಲರಾತ್ರಿ ನಿಮಿತ್ತ ಹೊಸ ಮಡಿಕೆ ಖರೀದಿಯನ್ನು ಮಾಡಿಕೊಂಡು ಪಾದಯಾತ್ರೆ ಮುಖಾಂತರ ಬರಿಗಾಲಿನಿಂದ ತೆಗೆದುಕೊಂಡು ಹೋಗಿದ್ದಾರೆ ಗ್ರಾಮಸ್ಥರು.
ಹಿಂದೂಸ್ತಾನ್ ಸಮಾಚಾರ್ / Lalita MP