ಗದಗ, 05 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಸೆರಗಿನಲ್ಲಿ ಇರುವ ಗ್ರಾಮ ಆ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ ಆದರೂ ಕೂಡ ಆ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ನಿಂತಿಲ್ಲ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ
ಹಿಂದೂ ಮುಸ್ಲಿಂ ಭಾವೈಕ್ಯತೆ ಹಬ್ಬ ಅಂದ್ರೆ ಅದುವೇ ಮೊಹರಂ ಹಬ್ಬ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುರಡಿ ಗ್ರಾಮದಲ್ಲಿ ಸುಮಾರು 140 ಮನೆಗಳನ್ನು ಹೊಂದಿರುವ ಈ ಪುಟ್ಟ ಗ್ರಾಮ. ನೀವು ಮುಸ್ಲಿಂ ಇರುವ ಊರಲ್ಲಿ ಮೊಹರಂ ಆಚರಣೆ ಮಾಡುವುದು ಅದು ಸರ್ವೇಸಾಮಾನ್ಯ ಗದಗ ಜಿಲ್ಲೆಯ ಮುರಡಿ ಗ್ರಾಮದಲ್ಲಿ ಯಾವುದೇ ಒಂದು ಮುಸ್ಲಿಂ ಕುಟುಂಬ ಇಲ್ಲ ಆದರೂ ಕೂಡ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
ಈ ಗ್ರಾಮದಲ್ಲಿ ಮೊಹರಂ ಹಬ್ಬ ಬಂದ್ರೆ ಸಾಕು ಚಿಕ್ಕ ಮಕ್ಕಳಿಂದ ವಯಸ್ಸಾದರೂ ಕೂಡ ಮೊಹರಂ ಹಬ್ಬದಲ್ಲಿ ಭಾಗವಹಿಸಿ ವಿಜೃಂಭಣೆಯಿಂದ ಸಂಭ್ರಮಿಸುತ್ತಾರೆ ಈ ಗ್ರಾಮವು ಅಕ್ಕ ಪಕ್ಕದಲ್ಲಿರುವ ಎಲ್ಲಾ ಗ್ರಾಮಗಳಿಗೆ ಮಾದರಿಯಾಗಿವೆ ಎಂದು ಹೇಳಿದರು ಕೂಡ ತಪ್ಪಾಗಲಿಕ್ಕಿಲ್ಲ ಮುಂದೆ ಕೂಡ ಈ ಗ್ರಾಮದಲ್ಲಿ ವಿಜೃಂಭಣೆಯಿಂದ ಮೊಹರಂ ಹಬ್ಬ ಆಚರಣೆ ಮಾಡಲಿ ಹಾರೈಸುತ್ತೇವೆ
ಹಿಂದೂಸ್ತಾನ್ ಸಮಾಚಾರ್ / Lalita MP