ನವದೆಹಲಿ, 05 ಜುಲೈ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ಪ್ರಧಾನಮಂತ್ರಿ ಕಮಲಾ ಬಿಸ್ಸೆಸ್ಸರ್ ನೇತೃತ್ವದಲ್ಲಿ ಆರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಕ್ರೀಡೆ, ಸಂಸ್ಕೃತಿ, ವೈದ್ಯಕೀಯ, ಕೃಷಿ, ಸಂಶೋಧನೆ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸುವ ಒಪ್ಪಂದಗಳು ಜಾರಿಗೆ ಬಂದಿವೆ.
ಭಾರತೀಯ ಮೂಲದ ಆರನೇ ತಲೆಮಾರಿನವರೆಗೆ OCI ಕಾರ್ಡ್ ನೀಡಲು ನಿರ್ಧಾರವಾಗಿದ್ದು, 2000 ಲ್ಯಾಪ್‌ಟಾಪ್ ಉಡುಗೊರೆ, ಅಂಗವಿಕಲರಿಗೆ ಕೃತಕ ಅಂಗ ಶಿಬಿರಗಳು, ಕೃಷಿ ಉಪಕರಣ, 20 ಡಯಾಲಿಸಿಸ್ ಘಟಕ, 2 ಸಾಗರ ಆಂಬ್ಯುಲೆನ್ಸ್ ನೀಡುವುದಾಗಿ ಪ್ರಧಾನಿ ಘೋಷಿಸಿದರು.
ಭಯೋತ್ಪಾದನೆ ವಿರುದ್ಧ ಜಂಟಿ ಬದ್ಧತೆ ಪುನರುಚ್ಚಾರವಾಗಿದ್ದು, ಭಾರತ–ಕ್ಯಾರಿಕೋಮ್ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ನಿರ್ಧಾರವಾಯಿತು. ಪ್ರಧಾನಿ ಮೋದಿ, ಟ್ರಿನಿಡಾಡ್ ಸಂಸತ್ತಿನ ಜಂಟಿ ಅಧಿವೇಶನಕ್ಕೆ ಭಾಷಣ ಮಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa