ಕೆಕೆಆರ್‌ಡಿಬಿ ಅಕ್ಷರ, ಆರೋಗ್ಯ, ಉದ್ಯೋಗ ಅವಿಷ್ಕಾರಕ್ಕೆ ರಾಜ್ಯಪಾಲರ ಮೆಚ್ಚುಗೆ
ಬೆಂಗಳೂರು, 05 ಜುಲೈ (ಹಿ.ಸ.) : ಆ್ಯಂಕರ್ : ವಿಶ್ವವಿದ್ಯಾಲಯಗಳಿಗೂ ಅನುದಾನಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಳೆದೊಂದು ವರ್ಷದಿಂದ ಕೈಗೆತ್ತಿಕೊಂಡಿರುವ ಶಿಕ್ಷಣ, ಆರೋಗ್ಯ, ಉದ್ಯೋಗ, ಕೌಶಲ್ಯ, ಹಿಂದುದುಳಿದ ವರ್ಗಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಸೇರಿದಂತೆ ಹಲವು ರಂಗದಲ್ಲಿ ಕೈಗೆತ್ತ
Ajaya


ಬೆಂಗಳೂರು, 05 ಜುಲೈ (ಹಿ.ಸ.) :

ಆ್ಯಂಕರ್ : ವಿಶ್ವವಿದ್ಯಾಲಯಗಳಿಗೂ ಅನುದಾನಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಳೆದೊಂದು ವರ್ಷದಿಂದ ಕೈಗೆತ್ತಿಕೊಂಡಿರುವ ಶಿಕ್ಷಣ, ಆರೋಗ್ಯ, ಉದ್ಯೋಗ, ಕೌಶಲ್ಯ, ಹಿಂದುದುಳಿದ ವರ್ಗಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಸೇರಿದಂತೆ ಹಲವು ರಂಗದಲ್ಲಿ ಕೈಗೆತ್ತಕೊಂಡಿರುವ ವಿನೂತನ ಯೋಜನೆಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರೆಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರಂಸಿಂಗ್‌ ಹೇಳಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಅವರು, ಕೆಕೆಆರ್‌ಡಿಬಿ 2025- 26 ನೇ ಸಾಲಿನ 5 ಸಾವಿರ ಕೋಟಿ ರು ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ಕೋರಿ ರಾಜ್ಯ ಯೋಜನಾ ಖಾತೆ ಸಚಿವ ಡಿ. ಸುದಾಕರ್‌ ಜೊತೆಗೂಡಿಕೊಂಡು ಪ್ರಸ್ತಾವನೆ ಸಲ್ಲಿಸಿದ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರಚಂದ್‌ ಗೆಲ್ಹೋಟ್‌ ಅವರಿಗೆ ಮಂಡಳಿ ಹಲವು ರಂಗಗಳಲ್ಲಿ ಕೈಗೆತ್ತಿಕೊಂಡಿರುವ ನೂತನ ಯೋಜನೆಗಳ ಬಗ್ಗೆ ವಿವರಿಸಲಾಯ್ತು ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ರಾಜ್ಯಪಾಲರು ರಾಜ್ಯದ ವಿವಿಗಳ ಕುಲಾಧಿಪತಿಗಳು, ಹೀಗಾಗಿ ಕಲ್ಯಾಣ ಕರ್ಟಾಕದಲ್ಲಿ ಬರುವ ಉನ್ನತ ಶಿಕ್ಷಣ ಸಂಸ್ಥೆಗಳಾದ ವಿಶ್ವ ವಿದ್ಯಾಲಯಗಳಿಗೂ ಮಂಡಳಿಯ ಅನುದಾನದ ಹಂಚಿಕೆಯಲ್ಲಿ ಪರಿಗಣಿಸುವಂತೆ ಅಮೂಲ್ಯ ಸಲಹೆ ನೀಡಿದ್ದಾರೆಂದೂ ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿ ಶಿಕ್ಷಣ , ಆರೋಗ್ಯ ರಂಗದಲ್ಲಿನ ಯೋಜನೆಗಳನ್ನು ರಾಜ್ಯಪಾಲರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಉನ್ನತ ಶಿಕ್ಷಣ ರಂಗದ ಕೇಂದ್ರವಾದ ವಿಶ್ವ ವಿದ್ಯಾಲಯಗಳಿಗೂ ಅನುದಾನ ನೀಡುವಲ್ಲಿ ಪರಿಗಣನೆಗೆ ತೆಗೆದುಕೊಳ್ಳುವಂತೆ ರಾಜ್ಯಪಾಲರು ಸಲಹೆ ನೀಡಿದ್ದಾರೆಂದು ಡಾ. ಅಜಯ್ ಧರಂಸಿಂಗ್‌ ಹೇಳಿದ್ದಾರೆ.

ಡಾ. ನಂಜುಂಡಪ್ಪ ವರದಿಯನ್ವಯವೇ ಸಿಡಿಐ ಸೂಚ್ಯಂಕ ಗುರುತಿಸಿ ಯೋಜನೆ ರೂಪಿಸಬೇಕಾಗಿದೆ. ಮೈಕ್ರೋ, ಮ್ಯಾಕ್ರೋ ಯೋಜನೆಯಡಿಯಲ್ಲಿನ ಅನುದಾನ ಹಂಚಿಕೆಯ ವಿವರಗಳಿರುವ ಕ್ರಿಯಾ ಯೋಜನೆ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದು ಅನುಮೋದನೆಗೆ ಕೋರಲಾಗಿದೆ. ಮಾತುಕತೆ ಸಂದರ್ಭದಲ್ಲಿ ರಾಜ್ಯಪಾಲರು ಕೆಕೆಆರ್‌ಡಿಬಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

10. 5. 2025 ರಂದು ಜರುಗಿದ ಕೆಕೆಆರ್‌ಡಿಬಿ ಮಂಡಳಿಯ ಸಭೆಯಲ್ಲಿನ ಚಚ್ರೆಗಳು, ನಿರ್ಣಯಗಳಂತೆ ಹಾಗೂ ಮಂಡಳಿಯ ನಿಯಮಗಲಂತೆ, 2025-- 26 ರ ಮೈಕ್ರೆ, ಮ್ಯಾಕ್ರೋ, ವಿವೇಚನೆ ಅನುದಾನ, ಆಡಳಿತಾತ್ಮಕ ವೆಚ್ಚ ಸೇರಿದಂತೆ ಎಲ್ಲಾ ಹಂತಗಳಲ್ಲಿಯೂ ಅನುದಾನ ಹಂಚಿಕೆ ಮಾಡುವ ಕ್ರಿಯಾ ಯೋಜನೆ ರೂಪಿಸಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಮುಖ್ಯಮಂತ್ರಿಗಳು ಮಂಡಿಸಿರುವ ಆಯವ್ಯವಯದಲ್ಲಿನ ಮಿತಿಯಂತೆಯೇ 5 ಸಾವಿರ ಕೋಟಿ ರುಪಾಯಿಗಳಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಆರ್ಥಿಕ ಇಲಾಖೆ 5 ಸಾವಿರ ಕೋಟಿ ರುಪಾಯಿಗಳಿಗೆ ಕ್ರಿಯಾ ಯೋಜನೆ ತಯ್ಯಾರಿಸಲು ಅನುಮತಿ ನೀಡಿದೆ. ಅದರಂತೆಯೇ ಮಂಡಳಿಯ ಕ್ರಿಯಾ ಯೋಜನೆ ರಾಜ್ಯಪಾಲರಿಗೆ ಸಲ್ಲಿಸಿ ಅನುಮದೋನೆಗೆ ಕೋರಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande