ಅಮೆರಿಕದಿಂದ 6 ಭಾರತೀಯ ಕಂಪನಿಗಳಿಗೆ ನಿರ್ಬಂಧ
ನವದೆಹಲಿ, 31 ಜುಲೈ (ಹಿ.ಸ.) : ಆ್ಯಂಕರ್ : ಇರಾನ್‌ನಿಂದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸಿದ ಆರೋಪದ ಮೇಲೆ ಅಮೆರಿಕವು 6 ಭಾರತೀಯ ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ವಿಶ್ವದಾದ್ಯಂತ 20 ಕಂಪನಿಗಳ ವಿರುದ್ಧ ಈ ಕ್ರಮ ಕೈಗೊಂಡಿದ್ದು, ಇರಾನ್‌ಗೆ ಹಣದ ಹರಿವನ್ನು ತಡೆಯುವುದು ಈ ಕ್ರ
ಅಮೆರಿಕದಿಂದ 6 ಭಾರತೀಯ ಕಂಪನಿಗಳಿಗೆ ನಿರ್ಬಂಧ


ನವದೆಹಲಿ, 31 ಜುಲೈ (ಹಿ.ಸ.) :

ಆ್ಯಂಕರ್ : ಇರಾನ್‌ನಿಂದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸಿದ ಆರೋಪದ ಮೇಲೆ ಅಮೆರಿಕವು 6 ಭಾರತೀಯ ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ವಿಶ್ವದಾದ್ಯಂತ 20 ಕಂಪನಿಗಳ ವಿರುದ್ಧ ಈ ಕ್ರಮ ಕೈಗೊಂಡಿದ್ದು, ಇರಾನ್‌ಗೆ ಹಣದ ಹರಿವನ್ನು ತಡೆಯುವುದು ಈ ಕ್ರಮದ ಉದ್ದೇಶವಾಗಿದೆ.

ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿ., ರಾಮ್ನಿಕ್ ಲಾಲ್ ಎಸ್ ಗೋಸಾಲಿಯಾ & ಕಂಪನಿ, ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈ.ಲಿ., ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈ.ಲಿ., ಜುಪಿಟರ್ ಡೈಕೆಮ್ ಪ್ರೈ.ಲಿ. ಮತ್ತು ಕಾಂಚನ್ ಪಾಲಿಮರ್ಸ್ ನಿರ್ಬಂಧಿತ ಭಾರತೀಯ ಕಂಪನಿಗಳಾಗಿವೆ.

ಈ ಕಂಪನಿಗಳು 2024–25 ರಲ್ಲಿ ಇರಾನ್‌ನಿಂದ ಕೋಟ್ಯಾಂತರ ಮೌಲ್ಯದ ಮೆಥನಾಲ್, ಪೆಟ್ರೋಲ್ ರಾಸಾಯನಿಕ ಹಾಗೂ ಪಾಲಿಮರ್ ಉತ್ಪನ್ನಗಳನ್ನು ಖರೀದಿಸಿದ್ದರೆಂದು ಅಮೆರಿಕ ಆರೋಪಿಸಿದೆ.

ನಿಷೇಧದ ಬಳಿಕ ಈ ಕಂಪನಿಗಳ ಅಮೆರಿಕದ ಆಸ್ತಿಗಳು ಸ್ಥಗಿತವಾಗಲಿದ್ದು, ಶೇಕಡಾ 50 ಕ್ಕಿಂತ ಹೆಚ್ಚು ಪಾಲುದಾರಿಕೆ ಹೊಂದಿದ ಕಂಪನಿಗಳ ಮೇಲೂ ಪರಿಣಾಮ ಬೀರುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande