ನವದೆಹಲಿ, 31 ಜುಲೈ (ಹಿ.ಸ.) :
ಆ್ಯಂಕರ್ : ಲೆಫ್ಟಿನೆಂಟ್ ಜನರಲ್ ಪುಷ್ಪೇಂದ್ರ ಸಿಂಗ್ ಅವರನ್ನು ಸೇನೆಯ ಉಪ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಅವರು ಆಗಸ್ಟ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಉಪ ಸೇನಾ ಮುಖ್ಯಸ್ಥರಾಗಿರುವ ಲೆ. ಜನರಲ್ ಎನ್.ಎಸ್. ರಾಜಸುಬ್ರಮಣಿ ಅವರು 39 ವರ್ಷಗಳ ಸೇವೆ ಬಳಿಕ ನಿವೃತ್ತಿಯಾಗಲಿದ್ದಾರೆ. ಅವರು ಗರ್ಹ್ವಾಲ್ ರೈಫಲ್ಸ್‌ನಲ್ಲಿ 1985ರಲ್ಲಿ ಸೇರ್ಪಡೆಗೊಂಡು, ವಿವಿಧ ಪ್ರಮುಖ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಪರಮ ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು.
ಪುಷ್ಪೇಂದ್ರ ಸಿಂಗ್ ಅವರು 1987ರಲ್ಲಿ 4 ಪ್ಯಾರಾ ವಿಶೇಷ ಪಡೆಯಲ್ಲಿ ಸೇರ್ಪಡೆಗೊಂಡು, ಲೆಬನಾನ್ ಹಾಗೂ ಶ್ರೀಲಂಕಾದ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ಆಪರೇಷನ್ ಪವನ್, ಮೇಘದೂತ್, ರಕ್ಷಕ್, ಆರ್ಕಿಡ್‌ನಲ್ಲಿ ಭಾಗವಹಿಸಿದ್ದರು. 2022ರಲ್ಲಿ ರೈಸಿಂಗ್ ಸ್ಟಾರ್ ಕಾರ್ಪ್ಸ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa