ಕುರೇಕುಪ್ಪ : ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಕುರೇಕುಪ್ಪ, 31 ಜುಲೈ (ಹಿ.ಸ.) : ಆ್ಯಂಕರ್ : ಕುರೇಕುಪ್ಪ ಪುರಸಭೆ ವತಿಯಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಮುನಿಸಿಪಾಲಿಟಿ ಯೋಜನೆ ಹಂತ-4ರಲ್ಲಿ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಅನುದಾನದ ಶೇ 7.25ರ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಇತರೆ ಹಿಂದುಳಿದ ವರ್ಗದ ಅರ್ಹ ಖಾಲಿ ನಿವೇಶನ ಹೊಂದಿದ ಫಲಾನುಭವಿಗ
ಕುರೇಕುಪ್ಪ : ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕುರೇಕುಪ್ಪ, 31 ಜುಲೈ (ಹಿ.ಸ.) :

ಆ್ಯಂಕರ್ : ಕುರೇಕುಪ್ಪ ಪುರಸಭೆ ವತಿಯಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಮುನಿಸಿಪಾಲಿಟಿ ಯೋಜನೆ ಹಂತ-4ರಲ್ಲಿ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಅನುದಾನದ ಶೇ 7.25ರ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಇತರೆ ಹಿಂದುಳಿದ ವರ್ಗದ ಅರ್ಹ ಖಾಲಿ ನಿವೇಶನ ಹೊಂದಿದ ಫಲಾನುಭವಿಗಳಿಗೆ ಪಕ್ಕ ಮನೆ ನಿರ್ಮಾಣಕ್ಕಾಗಿ ಅರ್ಥಿಕ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ಅರ್ಜಿದಾರರು ಪುರಸಭೆ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಯನ್ನು ಸಂಪರ್ಕಸಿ ಅರ್ಜಿ ಪಡೆದು ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 25 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು.

ಸಲ್ಲಿಸಬೇಕಾದ ಅಗತ್ಯ ದಾಖಲೆ:

ಅರ್ಜಿ ನಮೂನೆ, ನಿವೇಶನಕ್ಕೆ ಸಂಬಂಧಿಸಿದ ಆಸ್ತಿ ದಾಖಲಾತಿಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವೊಟರ್ ಐಡಿ ಮತ್ತು ರೇಷನ್ ಕಾರ್ಡ್, ಎರಡು ಭಾವ ಚಿತ್ರ, ಅರ್ಜಿದಾರರ ಹಾಗೂ ಕುಟುಂಬದವರ ಹೆಸರಿನಲ್ಲಿ ಯಾವುದೇ ಮನೆ ಇಲ್ಲ ಎಂದು ಕೋರ್ಟ್ ಅಫಿಡಿವೇಟ್ ಸಲ್ಲಿಸಬೇಕು. ​​​​​​​​​​​

​​​​ನಿಗದಿತ ದಿನಾಂಕದ ನಂತರ ಬಂದಂತ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಅಗತ್ಯ ದಾಖಲಾತಿಗಳನ್ನು ಹೊಂದಿರದ ಅರ್ಜಿಗಳನ್ನು ಯಾವುದೇ ಸೂಚನೆ ಇಲ್ಲದೆ ತಿರಸ್ಕರಿಸಲಾಗುವುದು ಎಂದು ಕುರೇಕುಪ್ಪ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande