ಧರ್ಮಸ್ಥಳ, 31 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರ ರೂಪ ಪಡೆದಿದ್ದು, ದೂರುದಾರ ಗುರುತಿಸಿದ 6ನೇ ಆರನೇ ಸ್ಥಳದಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಮೂಲಗಳು ದೃಢಪಡಿಸಿವೆ. ಈ ಮೂಲಕ ಪ್ರಕರಣವು ಮತ್ತಷ್ಟು ಗಂಭೀರ ತಿರುವು ಪಡೆದಿದೆ.
6ನೇ ಸ್ಥಳದಲ್ಲಿ 15 ಕಾರ್ಮಿಕರೊಂದಿಗೆ ಉತ್ಖನನ ಕಾರ್ಯ ನಡೆಯುತ್ತಿದ್ದು, ಪೂರ್ತಿ ದೇಹವಲ್ಲದೆ ಕೆಲ ಅಸ್ಥಿಭಾಗಗಳು ಮಾತ್ರ ಪತ್ತೆಯಾಗಿವೆ. ಉತ್ಖನನ ಇನ್ನೂ ಆಳಕ್ಕೆ ಮುಂದುವರೆಯುತ್ತಿದೆ. ಪತ್ತೆಯಾದ ಅವಶೇಷಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ.
ಎಸ್ಐಟಿ ಇದೀಗ 7 ಹಾಗೂ 8ನೇ ಸ್ಥಳಗಳಲ್ಲಿ ಉತ್ಖನನ ಕಾರ್ಯಾಚರಣೆ ನಡೆಸಲು ಸಿದ್ಧತೆಯಲ್ಲಿದೆ. ಈ ನಡುವೆ, 1995–2005 ಮತ್ತು 2005–2015ರ ಅವಧಿಯ ನಾಪತ್ತೆ, ಕೊಲೆ, ಅತ್ಯಾಚಾರ ಪ್ರಕರಣಗಳ ಮಾಹಿತಿನ್ನು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಂದ ಕೇಳಲಾಗಿದೆ. ಎರಡು ಭಾಗಗಳ ಪಟ್ಟಿಯಾಗಿ ಈ ದಾಖಲೆಗಳನ್ನು ಒದಗಿಸುವಂತೆ ಪತ್ರದ ಮೂಲಕ ಎಸ್ಐಟಿ ಸೂಚಿಸಿದೆ.
ಜುಲೈ 28ರಂದು ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದರು. ಮೊದಲ ಹಂತದ 5 ಸ್ಥಳಗಳಲ್ಲಿ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ,
ಘಟನೆ ಹಿನ್ನೆಲೆ:
1998ರಿಂದ 2014ರ ನಡುವೆ ಧರ್ಮಸ್ಥಳದ ನೇತ್ರಾವತಿ ನದಿ ಸಮೀಪದ ಕಾಡಿನಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕನೊಬ್ಬ ಅನಾಮಿಕವಾಗಿ ಆರೋಪಿಸಿದ್ದನು. ಈ ಶವಗಳು ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ್ದಾಗಿದ್ದವು ಎಂದು ಹೇಳಲಾಗಿತ್ತು.
ಎಸ್‌ಐಟಿ ರಚನೆ:
ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜುಲೈ 19, 2025ರಂದು ಡಿಜಿಪಿ ಡಾ. ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa