ಗದಗ, 31 ಜುಲೈ (ಹಿ.ಸ.) :
ಆ್ಯಂಕರ್ : ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಾಗದೆ ಸೋಲಿನ ಹತಾಷೆಯಲ್ಲಿರುವ ಈ ಪಕ್ಷವು ಚುನಾವಣಾ ಅಕ್ರಮದ ಹೊಸ ಕಪಟ ನಾಟಕವನ್ನು ಪ್ರಾರಂಭ ಮಾಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠರವರು ಕಾಂಗ್ರೇಸ್ ನಡೆಯನ್ನು ತೀವ್ರವಾಗಿ ಖಂಡಿಸಿರುವರು.
ಅವರಿಂದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರು ಈ ಕಪಟ ನಾಟಕ ಮಾಡಲು ಅಗಸ್ಟ್ 5 ರಂದು ಆಗಮಿಸಲಿದ್ದು, ಇವರದೊಂದು ಕಪಟ ನಾಟಕ ಕಂಪನಿಯಾಗಿದೆ. ರಾಹುಲ ಗಾಂಧಿಯವರು ಬೆಂಗಳೂರಿಗೆ ಬಂದು ಮಹಾದೇವಪೂರ ವಿಧಾನಸಭಾ ಕ್ಷೇತ್ರದಲ್ಲಿ ಆಗಲಿ ಅಥವಾ ಪಾದಯಾತ್ರೆ ಅಥವಾ ಧರಣಿ ಮಾಡಲಾಗುವದು ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರು ಹೇಳಿದ್ದು ಕಾಂಗ್ರೇಸ್ ಮತ್ತು ರಾಹುಲ್ ಗಾಂಧಿಯವರ ನಡುವಳಿಕೆ ಗಮನಿಸಿದರೆ ಅಯ್ಯೋ ಪಾಪ ಅನಿಸುತ್ತದೆ. ಚುನಾವಣಾ ಆಯೋಗದ ಬಗ್ಗೆಯೂ ಅನುಮಾನ ಸುಪ್ರೀಮ್ ಕೋರ್ಟ್ ಬಗ್ಗೆಯೂ ಕಾಂಗ್ರೇಸ್ ಪಕ್ಷದ ನಾಯಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ ರವರ ಬಳಿ ಪುರಾವೆಗಳು ಇದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿ ಹಾಗು ಅದನ್ನು ಸುಪ್ರಿಮ್ ಕೋರ್ಟ್‍ನಲ್ಲಿಯೂ ಸಹ ಪ್ರಶ್ನೆ ಮಾಡಬಹುದು. ಹೇಗಾದರು ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೇಸ್ ಪ್ರಯತ್ನ ಮಾಡುತ್ತಿದೆ. ಈ ದೇಶದ ಜನ ಕಾಂಗ್ರೇಸ್ ಪಕ್ಷಕ್ಕೆ 10 ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನವನ್ನು ಕೂಡಾ ನೀಡಲಿಲ್ಲಾ. ರಾಜ್ಯದಲ್ಲಿ ಒಂದು ವೇಳೆ ಚುನಾವಣಾ ಅಕ್ರಮಗಳು ನಡೆದಿದ್ದರೆ ಬಿಜೆಪಿ ಪಕ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಿರಲಿಲ್ಲಾ. ಹಾಗು ಕಾಂಗ್ರೇಸ್ ಪಕ್ಷ 136 ಸ್ಥಾನವನ್ನು ಪಡೆಯುತ್ತಿರಲಿಲ್ಲಾ. 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಗೆಲ್ಲುತ್ತಿತ್ತು. ಹಾಗಿದ್ದರೂ 3 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆದ್ದಿದ್ದು ಹೇಗೆ ಇದೊಂದು ಕಾಂಗ್ರೇಸ್ ಪಕ್ಷದ ಮೂರ್ಖ ತನದ ಪರಮಾವದಿಯಾಗಿದೆ.
ಚುನಾವಣಾ ಆಯೋಗಕ್ಕೆ ಪ್ರತಿ ಚುನಾವಣೆ ಮುಂದೆ ಮತಪಟ್ಟಿಯನ್ನು ಪರಿಷ್ಕøಣೆ ಮಾಡುವ ಅಧಿಕಾರವಿದ್ದು ಅದರಂತೆ ಬಿಹಾರದಲ್ಲಿ ಮತಪಟ್ಟಿಯಿಂದ ಸತ್ತವರ ಹೆಸರನ್ನ ಎರಡೂ ಕಡೆ ಮತದ ಅಧಿಕಾರ ಹೊಂದಿದವರು, ಅಕ್ರ ವಲಸಿಗರ ಹಾಗು ಬೇರೆ ಕಡೆ ಹೋಗಿ ವಾಸುಸುತ್ತಿರುವ ಮತದಾರರ ಹೆಸರನ್ನು ತೆಗೆಯುವ ಹಕ್ಕು ಚುನಾವಣಾ ಆಯೋಗಕ್ಕೆ ಇದೆ. ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದು ನೆಲೆಸಿರುವ ಜನರಿಗೆ ಮತದಾನ ಮಾಡುವ ಯಾವುದೆ ಹಕ್ಕು ಅವರಿಗೆ ಇರುವುದಿಲ್ಲ. ಕಾಂಗ್ರೇಸ್ ಪಕ್ಷದ ನಾಯಕರು ಯಾವುದೇ ರಾಜ್ಯಕ್ಕೆ ಹೋದರೂ ಅವರಿಗೆ ಕವಡೆಕಾಸಿನ ಕಿಮ್ಮತ್ತಿಲ್ಲಾ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ಪಕ್ಷ ಇಲ್ಲಿ ಜನರನ್ನು ಕೂಡಿಸಲು ಕಾಂಗ್ರೇಸ್ ಹೈಕಮಾಂಡ ಸೂಚಿಸಿದ್ದು, ಅದರಂತೆ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿಗಳು ನಡೆದುಕೊಳ್ಳುತ್ತಿರುವರು ಎಂದು ಎಂ.ಎಂ.ಹಿರೇಮಠರವರು ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP