ಕೊಪ್ಪಳ ಬಲ್ಡೋಟಾ ಹೋರಾಟಗಾರರಿಗೆ ಜಾಮೀನು : ಆಗಸ್ಟ್ 3 ರಂದು ಸಭೆ
ಕೊಪ್ಪಳ, 31 ಜುಲೈ (ಹಿ.ಸ.) : ಆ್ಯಂಕರ್ : ಬಲ್ಡೋಟಾ ಬಿಎಸ್‍ಪಿಎಲ್ ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎರೆಡು ಪ್ರತ್ಯೇಕ ಪ್ರಕರಣಗಳ ತಲಾ ಏಳು ಜನರಿಗೆ ಗುರುವಾರ ಜಾಮೀನು ಪಡೆದಿದ್ದಾರೆ. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಸೇರಿ ಜ
ಕೊಪ್ಪಳ : ಬಲ್ಡೋಟಾ ಹೋರಾಟಗಾರರಿಗೆ ಬೇಲ್ : ಆಗಸ್ಟ್ 3 ರಂದು ಸಭೆ


ಕೊಪ್ಪಳ, 31 ಜುಲೈ (ಹಿ.ಸ.) :

ಆ್ಯಂಕರ್ : ಬಲ್ಡೋಟಾ ಬಿಎಸ್‍ಪಿಎಲ್ ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎರೆಡು ಪ್ರತ್ಯೇಕ ಪ್ರಕರಣಗಳ ತಲಾ ಏಳು ಜನರಿಗೆ ಗುರುವಾರ ಜಾಮೀನು ಪಡೆದಿದ್ದಾರೆ.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಸೇರಿ ಜಂಟಿ ಕ್ರಿಯಾ ವೇದಿಕೆ ರೂಪಿಸಿಕೊಂಡು, ಕಂಪನಿ ಮತ್ತು ಹೋರಾಟಗಾರರು ಪರಸ್ಪರ ದೂರು – ಪ್ರತಿ ದೂರು ದಾಖಲಾಗಿದೆ. ಬಲ್ಡೋಟಾ ಕಂಪನಿ ಹಾಕಿದ ಎರಡು ಕೇಸಲ್ಲಿ ತಲಾ ಏಳು ಜನರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಬಲ್ಡೋಟ ಕಂಪನಿಯು, ಕೇಸ್ ನಂ. 131/2025ರಲ್ಲಿ ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಮಂಗಳೇಶ ರಾಠೋಡ, ಮುದಕಪ್ಪ ಹೊಸಮನಿ, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಭೀಮಸೇನ ಕಲಕೇರಿ ಮತ್ತು ಎಸ್.ಎ. ಗಫಾರ್ ಹಾಗೂ ಕೇಸ್ ನಂ. 81/2025 ರಲ್ಲಿ ಮೂಕಪ್ಪ ಮೇಸ್ತ್ರೀ ಬಸಾಪೂರ, ಯಮನೂರಪ್ಪ ಹಾಲಳ್ಳಿ ಬಸಾಪೂರ, ಭೀಮಸೇನ ಕಲಕೇರಿ, ಯಗ್ಗಪ್ಪ ಲಿಂಗದಳ್ಳಿ ಬಸಾಪೂರ, ಕೆ.ಬಿ. ಗೋನಾಳ, ಮಂಗಳೇಶ ರಾಠೋಡ ಗಿಣಗೇರಿ ಮತ್ತು ಅಲ್ಲಮಪ್ರಭು ಬೆಟ್ಟದೂರುರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹೋರಾಟಗಾರರ ಪರ ವಕೀಲರಾದ ಡಿ.ಹೆಚ್. ಪೂಜಾರ ಅವರು ವಾದ ಮಂಡಿಸಿದ್ದರು. ಮಾಡಿದ್ದಾರೆ.

ಈ ಬೆಳವಣಿಗೆ ಮಧ್ಯೆ ನಿರಂತರ ಧರಣಿ ಸತ್ಯಾಗ್ರಹ ರೂಪಿಸಲು ಆಗಷ್ಟ್ 3 ರಂದು ಸಭೆ ಮಾಡುವ ಬಗ್ಗೆ ಪುರ ಪ್ರಮುಖರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಕಾರ್ಖಾನೆ ತೊಲಗುವವರೆಗೆ ಧರಣಿ ಕೂಡುವ ಕುರಿತು ಯೋಚನೆ ಮಾಡುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande