ಪೂಂಚ್, 30 ಜುಲೈ (ಹಿ.ಸ.) :
ಆ್ಯಂಕರ್ : ಬೆಳಗಿನ ಜಾವ ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್‌ನ ನಿಯಂತ್ರಣ ರೇಖೆ ಬಳಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಇಬ್ಬರು ಉಗ್ರರು ಸಾವನಪ್ಪಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಆದರೆ ಈ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಲಭಿಸಿಲ್ಲ.
ಬಾಬಾ ಬುದ್ಧ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ಪೂಂಚ್ ವಲಯದ ನಿಯಂತ್ರಣ ರೇಖೆಯಲ್ಲಿ ಭದ್ರತೆ ಕಟ್ಟು ನಿಟ್ಟಾಗಿ ಕೈಗೊಳ್ಳಲಾಗಿದೆ. ಸೇನೆ ನೀಡಿರುವ ಮಾಹಿತಿಯ ಪ್ರಕಾರ, ಮುಂಜಾನೆ ವೇಳೆ ಕೆಲವು ಶಂಕಾಸ್ಪದ ಚಟುವಟಿಕೆಗಳು ಪಹರೆಕಾವಲು ಪ್ರದೇಶದಲ್ಲಿ ಕಂಡುಬಂದವು.
ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ಭದ್ರತಾ ಪಡೆಗಳು ತಕ್ಷಣ ಕಾರ್ಯಾಚರಣೆ ಆರಂಭಿಸಿದವು. ಈ ಸಂದರ್ಭದಲ್ಲಿ ಉಗ್ರರು ನಿಯಂತ್ರಣ ರೇಖೆ ದಾಟಿ ನುಸುಳಲು ಯತ್ನಿಸಿದ್ದು, ಸೇನೆ ಅದನ್ನು ಯಶಸ್ವಿಯಾಗಿ ತಡೆದಿದೆ. ಘಟನೆಯ ಬಗ್ಗೆ ಎಕ್ಸ ಮೂಲಕ ಪ್ರತಿಕ್ರಿಯಿಸಿರುವ ವೈಟ್ ನೈಟ್ ಕಾರ್ಪ್ಸ್, ಪೂಂಚ್ ಸೆಕ್ಟರ್‌ನ ಸಾಮಾನ್ಯ ಪ್ರದೇಶದ ಬೇಲಿಯ ಬಳಿ ಶಂಕಿತ ಚಲನವಲನ ಕಂಡುಬಂದಿದ್ದು, ಅದಕ್ಕೆ ತಕ್ಷಣ ಪ್ರತಿದಾಳಿ ನಡೆಸಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ, ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa