ಧರ್ಮಸ್ಥಳ, 30 ಜುಲೈ (ಹಿ.ಸ.) :
ಆ್ಯಂಕರ್ : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಶವ ಹೂತಿರುವ ಪ್ರಕರಣದ ತನಿಖೆ ಮುಂದುವರೆದಿದ್ದು, ಇಂದು ಎಸ್‌ಐಟಿ ಮೂರು ತಂಡಗಳನ್ನು ರಚಿಸಿ ಮೂರು ಜಾಗಗಳಲ್ಲಿ ಏಕಕಾಲದಲ್ಲಿ ಉತ್ಖನನ ಆರಂಭಿಸಿದೆ. ನಿನ್ನೆ ನಡೆದ ಉತ್ಖನನದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ಅನಾಮಿಕ ವ್ಯಕ್ತಿ ಗುರುತಿಸಿದ 13 ಸ್ಥಳಗಳಲ್ಲಿ ಶೋಧ ನಡೆಯುತ್ತಿದ್ದು, ಇಂದು ನೇತ್ರಾವತಿ ಸ್ನಾನಘಟ್ಟದ ಬಳಿ ಸೇರಿದಂತೆ ಮೂರೂ ಕಡೆಗಳಲ್ಲಿ ಕಾರ್ಮಿಕರಿಂದ ಅರಣ್ಯ ಭೂಮಿಯಲ್ಲಿ ಉತ್ಖನನ ನಡೆಯುತ್ತಿದೆ. ಜೆಸಿಬಿ ಬಳಸುವುದನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ.
ನಿನ್ನೆ ಶೋಧ ಫಲಕಾರಿಯಾಗದ ಹಿನ್ನಲೆಯಲ್ಲಿ, ದೂರುದಾರ ವ್ಯಕ್ತಿಯನ್ನು ಮತ್ತೆ ತೀವ್ರವಾಗಿ ವಿಚಾರಣೆ ನಡೆಸಲಾಗಿದ್ದು, ಆತ ನಾನು ಅದೇ ಜಾಗದಲ್ಲೇ ಮೃತದೇಹಗಳನ್ನು ಹೂತಿದ್ದೇನೆ ಎಂದು ಹೇಳಿರುವುದಾಗಿ ಖಚಿತ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa