ಲಂಡನ್, 29 ಜುಲೈ (ಹಿ.ಸ.) :
ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನಡುವಿನ ಜಂಟಿ ಚರ್ಚೆಯಲ್ಲಿ ಪವನ ಶಕ್ತಿಯನ್ನು ಕುರಿತು ತೀವ್ರ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಟ್ರಂಪ್ ಪವನ ಟರ್ಬೈನ್‌ಗಳನ್ನು ದುಬಾರಿ, ಅಸ್ಥಿರ ಹಾಗೂ ಪರಿಸರ ನಾಶಕಾರಿ ಎಂದು ಟೀಕಿಸಿದರು. ಪವನ ಶಕ್ತಿ ಪಕ್ಷಿಗಳನ್ನು ಕೊಲ್ಲುತ್ತದೆ ಹಾಗೂ ಕೇವಲ ಸಬ್ಸಿಡಿಗಳಿಂದ ನಿಂತಿದೆ ಎಂದರು.
ಇದಕ್ಕೆ ಪ್ರತಿಯಾಗಿ ಸ್ಟಾರ್ಮರ್, ಪವನ ಶಕ್ತಿ ಅಗ್ಗವಾಗುತ್ತಿದೆ ಮತ್ತು ಬ್ರಿಟನ್‌ನ ಇಂಧನ ಭದ್ರತೆಗೆ ಅವಶ್ಯಕವಿದೆ ಎಂದು ಹೇಳಿದರು. ಇದು ಶುದ್ಧ, ದೇಶೀಯ ಶಕ್ತಿ ಮೂಲವಾಗಿದ್ದು, ಭವಿಷ್ಯದ ಪೀಳಿಗೆಗೆ ಮಾರ್ಗದರ್ಶಕ ಎಂದರು. ಪವನ ಶಕ್ತಿಯಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ ಹಾಗೂ ಪರಿಸರ ಗುರಿ ತಲುಪಲು ಸಹಾಯಕವಾಗಿದೆ ಎಂದೂ ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa