ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ : ಎಂ.ಎಸ್. ಉಪ್ಪಾರ್
ಮರಿಯಮ್ಮನಹಳ್ಳಿ, 29 ಜುಲೈ (ಹಿ.ಸ.) : ಆ್ಯಂಕರ್ : ರಂಗಕರ್ಮಿಗಳು ಮತ್ತು ಕಲಾವಿದರು ಹೆಚ್ಚಾಗಿ ಅಧ್ಯಯನಶೀಲರಾಗಿ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಉಪನ್ಯಾಸಕ, ಪತ್ರಕರ್ತ ಎಂ. ಸೋಮೇಶ್ ಉಪ್ಪಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದುರ್ಗಾದಾಸ ಕಲಾಮಂದಿರದಲ್ಲಿ ರಂಗಬಿಂಬ ಮತ್ತು ಕ
ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ ; ಎಂ.ಎಸ್. ಉಪ್ಪಾರ್


ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ ; ಎಂ.ಎಸ್. ಉಪ್ಪಾರ್


ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ ; ಎಂ.ಎಸ್. ಉಪ್ಪಾರ್


ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ ; ಎಂ.ಎಸ್. ಉಪ್ಪಾರ್


ಮರಿಯಮ್ಮನಹಳ್ಳಿ, 29 ಜುಲೈ (ಹಿ.ಸ.) :

ಆ್ಯಂಕರ್ : ರಂಗಕರ್ಮಿಗಳು ಮತ್ತು ಕಲಾವಿದರು ಹೆಚ್ಚಾಗಿ ಅಧ್ಯಯನಶೀಲರಾಗಿ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಉಪನ್ಯಾಸಕ, ಪತ್ರಕರ್ತ ಎಂ. ಸೋಮೇಶ್ ಉಪ್ಪಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದುರ್ಗಾದಾಸ ಕಲಾಮಂದಿರದಲ್ಲಿ ರಂಗಬಿಂಬ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಜಿಲ್ಲೆ ಇವರ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ನಡೆದ `ರಂಗ ಶ್ರಾವಣ ಸಂಭ್ರಮ’ದಲ್ಲಿ ಅವರು ಮಾತನಾಡಿದರು.

ಉತ್ತಮ ನಾಟಕವನ್ನು ನೀಡಲು ಬರಹಗಾರರಿಗೆ ಅನುಭವವು ಅಗತ್ಯ. ಅನುಭವದ ಬರಹದಲ್ಲಿ ಸತ್ವವನ್ನು, ಶಕ್ತಿಯನ್ನು, ಅಕ್ಷರದ ಸಾಮರ್ಥ್ಯವನ್ನು ಮತ್ತು ಸಂಪನ್ನತೆಗಳನ್ನು ಪ್ರತಿಬಿಂಬಿಸುತ್ತವೆ. ಅಷ್ಟೇ ಅಲ್ಲ, ಸಮಾಜಮುಖಿ ಆಗಲು ಸಾಧ್ಯ ಎಂದರು.

ರಂಗ ಶಿಕ್ಷಕ ಈಡಿಗರ ವೆಂಕಟೇಶ್ ಅವರು, ಮರಿಯಮ್ಮನಹಳ್ಳಿ ರಂಗ ಪರಿಸರದಲ್ಲಿ ಕಲೆ, ಕಲಾವಿದರು ಮತ್ತು ಸಾಂಸ್ಕøತಿಕ ಮನಸ್ಸುಗಳು ಸುಲಭವಾಗಿ ಸಿಗುತ್ತವೆ. ಇಲ್ಲಿಯೇ ಹುಟ್ಟಿ, ಬೆಳೆದಿರುವ ನನಗೆ ಮರಿಯಮ್ಮನಹಳ್ಳಿಯ ರಂಗಪರಿಸರವು ರಕ್ತದಲ್ಲಿ ಸೇರಿದ್ದು, ನನ್ನನ್ನು ರಂಗ ಶಿಕ್ಷಕನನ್ನಾಗಿ ರೂಪಿಸಿದೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯೆ ಪೂಜಾ ಅಶ್ವಿನಿ ನಾಗರಾಜ್ ಅವರು, ಕಲೆ ಮತ್ತು ಕಲಾವಿದರ ತವರೂರು ಮರಿಯಮ್ಮನಹಳ್ಳಿ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ ಅವರು ಕಾರ್ಯಕ್ರಮ ಉದ್ಘಾಟಿಸಿದರು. ರಂಗಬಿಂಬದ ಅಧ್ಯಕ್ಷೆ ಎಂ. ಗಾಯತ್ರಿದೇವಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತ ಡಾ. ಕೆ. ನಾಗರತ್ನಮ್ಮ, ಪಟ್ಟಣ ಪಂಚಾಯಿತಿ ಸದಸ್ಯ ಕೆ. ಮಂಜುನಾಥ, ಲಲಿತ ಕಲಾರಂಗದ ಅಧ್ಯಕ್ಷ ಎಚ್. ಮಂಜುನಾಥ, ಗಾಯಕ ಸಂತೋಷ ಕುಮಾರ್ ಚಂದುಕರ, ರಂಗ ನಿರ್ದೇಶಕ ಸರದಾರ ಬಿ. ಸೋನು, ಡ್ಯಾನ್ಸ್ ಅಕಾಡೆಮಿ ಸೋನು ಸಭೆಯಲ್ಲಿ ಮುಖ್ಯಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ಜಿ. ಸೋಮಣ್ಣ ಗೊಲ್ಲರಹಳ್ಳಿ ತಂಡದವರಿಂದ ಸುಗಮ ಸಂಗೀತ ನಡೆಯಿತು. ಕೆ. ತಿಪ್ಪಣ್ಣ ಹಾರ್ಮೋನಿಯಂ, ಜಿ.ಕೆ. ಮೌನೇಶ್ ತಬಲ ಸಾಥ್ ನೀಡಿದರು.

ಬಸವರಾಜ ಟಿ. ತಂಡ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಾಹಕಾವ್ಯದÀ ಆಯ್ದ ಭಾಗವನ್ನು ಆಧರಿಸಿದ ಸರದಾರ ಬಿ. ನಿರ್ದೇಶನದಲ್ಲಿ `ಸೀತಾ ಮಂಡೋದರಿ’ ನಾಟಕ ಪ್ರದ್ರರ್ಶನವಾಯಿತು. ನಾಟಕಕ್ಕೆ ನಾಗಲಾಪುರದ ಶರಣಬಸವ ಗಾಯನ ನೀಡಿದರು.

ಮರಿಯಮ್ಮನಹಳ್ಳಿಯ ಸೋನು ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು. ಜಿ. ಮಲ್ಲಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಕೃತಿ ಎನ್. ದೇವನಕೊಂಡ ಸ್ವಾಗತಿಸಿದರು. ಕೆ. ನಾಗೇಶ ಕಾರ್ಯಕ್ರಮ ನಿರೂಪಿಸಿದರು. ರಂಗಬಿಂಬದ ಕಾರ್ಯದರ್ಶಿ, ಪತ್ರಕರ್ತ ಸಿ.ಕೆ. ನಾಗರಾಜ ಅವರು ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande