ಡಮಾಸ್ಕಸ್, 28 ಜುಲೈ (ಹಿ.ಸ.) :
ಆ್ಯಂಕರ್ : ಬಷರ್ ಅಲ್-ಅಸ್ಸಾದ್ ಅವರ ಆಡಳಿತ ಡಿಸೆಂಬರ್ 2024ರಲ್ಲಿ ಪತನಗೊಂಡ ನಂತರ ಸಿರಿಯಾದಲ್ಲಿ ಮೊದಲಬಾರಿಗೆ ಸಂಸತ್ತಿನ ಚುನಾವಣೆಯನ್ನು ಘೋಷಿಸಲಾಗಿದೆ. 2025ರ ಸೆಪ್ಟೆಂಬರ್ 15ರಿಂದ 20ರೊಳಗೆ ಈ ಚುನಾವಣೆ ನಡೆಯಲಿದ್ದು, ಪೀಪಲ್ಸ್ ಅಸೆಂಬ್ಲಿ ಉನ್ನತ ಸಮಿತಿ ಅಧ್ಯಕ್ಷ ಮೊಹಮ್ಮದ್ ತಹಾ ಅಲ್-ಅಹ್ಮದ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
210 ಸದಸ್ಯರ ಹೊಸ ಸಂಸತ್ತಿನಲ್ಲಿ, 70 ಸದಸ್ಯರನ್ನು ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರ್ಹಾ ನೇಮಕ ಮಾಡಲಿದ್ದು, ಉಳಿದ 140 ಸದಸ್ಯರನ್ನು ಪ್ರಾಂತೀಯ ಚುನಾವಣೆ ಕಾಲೇಜುಗಳು ಆಯ್ಕೆ ಮಾಡಲಿವೆ. ಮಾರ್ಚ್ 2025ರಲ್ಲಿ ಅನುಮೋದಿತ ತಾತ್ಕಾಲಿಕ ಸಂವಿಧಾನದನ್ವಯ, ಈ ಸಂಸತ್ತು ಶಾಶ್ವತ ಸಂವಿಧಾನ ರಚನೆಯವರೆಗೆ “ಜನರ ಸಮಿತಿ”ಯಾಗಿ ಕಾರ್ಯನಿರ್ವಹಿಸಲಿದೆ.
ಚುನಾವಣಾ ಘೋಷಣೆಯ ಸಮಯದಲ್ಲಿ ದೇಶದಲ್ಲಿ ಆಂತರಿಕ ಅಶಾಂತಿ ವ್ಯಾಪಕವಾಗಿದೆ. ಈ ತಿಂಗಳಲ್ಲೇ ದಕ್ಷಿಣ ಸುವೈದಾ ಪ್ರದೇಶದಲ್ಲಿ ಡ್ರೂಜ್ ಮತ್ತು ಬೆಡೋಯಿನ್ ಜನಾಂಗಗಳ ನಡುವೆ ಭೀಕರ ಹಿಂಸಾಚಾರ ಸಂಭವಿಸಿದ್ದು, ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa