ಮ್ಯಾಂಚೆಸ್ಟರ್, 28 ಜುಲೈ (ಹಿ.ಸ.) :
ಆ್ಯಂಕರ್ : ಭಾರತ- ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್ ಮುನ್ನಡೆ ಪಡೆದ ಇಂಗ್ಲೆಂಡ್ ವಿರುದ್ದ ಭಾರತದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರಿ ಸೋಲಿನ ದವಡೆಯಿಂದ ಪಾರು ಮಾಡಿದ್ದಾರೆ.
ಶುಭ್‌ಮನ್ ಗಿಲ್ (102), ರವೀಂದ್ರ ಜಡೇಜಾ (112*) ಹಾಗೂ ವಾಷಿಂಗ್ಟನ್ ಸುಂದರ್ (105*) ಅವರ ಶತಕ ಹಾಗೂ ಕೆಎಲ್ ರಾಹುಲ್ (90) ಅವರ ಉತ್ತಮ ಆಟ, ಟೀಂ ಇಂಡಿಯಾವನ್ನು ಸೋಲಿನಿಂದ ರಕ್ಷಿಸಿದರು.
ರಿಷಭ್ ಪಂತ್ ಬದಲಿಗೆ ಬ್ಯಾಟಿಂಗಗೆ ಬಂದ ಸುಂದರ್, ಜಡೇಜಾ ಜೊತೆಗೆ 203 ರನ್‌ಗಳ ಅಜೇಯ ಜೊತೆಯಾಟ ಕಟ್ಟಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗೆ 425 ರನ್ ಗಳಿಸಿ ಪಂದ್ಯ ಡ್ರಾ ಮಾಡಿಕೊಂಡಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa