ಥೈಲ್ಯಾಂಡ್–ಕಾಂಬೋಡಿಯಾ ಗಡಿ ವಿವಾದ : ಯುದ್ಧ ನಿಲ್ಲಿಸದಿದ್ದರೆ ವ್ಯಾಪಾರ ಇಲ್ಲ – ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, 27 ಜುಲೈ (ಹಿ.ಸ.) : ಆ್ಯಂಕರ್ : ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ನಡೆಯುತ್ತಿರುವ ಗಡಿ ಉದ್ವಿಗ್ನತೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧ ನಿಲ್ಲಿಸದಿದ್ದರೆ ಅಮೆರಿಕ ಈ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಕೈಗೊಳ್ಳುವುದಿಲ್ಲ ಎಂದು ಎಚ್
ಥೈಲ್ಯಾಂಡ್–ಕಾಂಬೋಡಿಯಾ ಗಡಿ ವಿವಾದ : ಯುದ್ಧ ನಿಲ್ಲಿಸದಿದ್ದರೆ ವ್ಯಾಪಾರ ಇಲ್ಲ – ಟ್ರಂಪ್ ಎಚ್ಚರಿಕೆ


ವಾಷಿಂಗ್ಟನ್, 27 ಜುಲೈ (ಹಿ.ಸ.) :

ಆ್ಯಂಕರ್ : ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ನಡೆಯುತ್ತಿರುವ ಗಡಿ ಉದ್ವಿಗ್ನತೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧ ನಿಲ್ಲಿಸದಿದ್ದರೆ ಅಮೆರಿಕ ಈ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಕೈಗೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ 'ಟ್ರುತ್ ಸೋಶಿಯಲ್' ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಎರಡು ದೇಶಗಳ ನಾಯಕರೊಂದಿಗೆ ಶಾಂತಿಯ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ. ಶಾಂತಿಯು ಸಾಧ್ಯವಿದೆ ಎಂಬ ಭರವಸೆಯು ಈಗ ಮೂಡಿದೆ ಎಂದೂ ಅವರು ಹೇಳಿದರು.

ಅವರು ಈ ವಿಷಯವನ್ನು ಭಾರತ–ಪಾಕಿಸ್ತಾನ ನಡುವಿನ ಹಿಂದಿನ ಗಡಿ ಉದ್ವಿಗ್ನತೆಗೂ ಹೋಲಿಸಿದ್ದು. ಆ ಸಂಘರ್ಷವನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದೆವು, ಈಗ ಇದೇ ರೀತಿ ಈ ಗಡಿ ವಿವಾದವನ್ನೂ ಶಾಂತಿಯುತವಾಗಿ ಪರಿಹರಿಸಲು ಯತ್ನಿಸುತ್ತಿರುವುದಾಗಿ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande