ಅಬ್ದುಲ್ ಕಲಾಂ ಪುಣ್ಯಸ್ಮರಣೆ : ಸಿದ್ದರಾಮಯ್ಯ ನಮನ
ಬೆಂಗಳೂರು, 27 ಜುಲೈ (ಹಿ.ಸ.) : ಆ್ಯಂಕರ್ : ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ತಮ್ಮ ಸಂದೇಶ ಹಂಚಿಕೊಂಡಿದ್ದು, ಅಗಾಧ ಪಾಂಡಿತ್ಯ, ಸರಳತೆ, ಮುತ್ಸದ್ದಿತನ ಎಲ್ಲವನ್ನೂ ಹೊಂದಿದ್ದ ಅಪ
Cm


ಬೆಂಗಳೂರು, 27 ಜುಲೈ (ಹಿ.ಸ.) :

ಆ್ಯಂಕರ್ : ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ತಮ್ಮ ಸಂದೇಶ ಹಂಚಿಕೊಂಡಿದ್ದು, ಅಗಾಧ ಪಾಂಡಿತ್ಯ, ಸರಳತೆ, ಮುತ್ಸದ್ದಿತನ ಎಲ್ಲವನ್ನೂ ಹೊಂದಿದ್ದ ಅಪರೂಪದ ವ್ಯಕ್ತಿತ್ವ ಅಬ್ದುಲ್ ಕಲಾಂರದ್ದು. ದೇಶದ ಕ್ಷಿಪಣಿ ವ್ಯವಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅವರ ಸಂಶೋಧನಾ ಬದುಕು, ಜನ ಸಾಮಾನ್ಯರಿಗಾಗಿ ರಾಷ್ಟ್ರಪತಿ ಭವನದ ಬಾಗಿಲು ತೆರೆದ ಅವರ ಸಾಮಾಜಿಕ ಕಳಕಳಿ ಎಲ್ಲವೂ ಇತಿಹಾಸದಲ್ಲಿ ಅವರನ್ನು ಅಮರವಾಗಿಸಿದೆ. ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ತಮ್ಮಿಡೀ ಬದುಕನ್ನೇ ರಾಷ್ಟ್ರನಿರ್ಮಾಣಕ್ಕಾಗಿ ಸವೆಸಿದ ಮಹಾಚೇತನಕ್ಕೆ ಗೌರವಪೂರ್ವಕ ನಮನಗಳು ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande