ಗದಗ, 26 ಜುಲೈ (ಹಿ.ಸ.) :
ಆ್ಯಂಕರ್ : ಗದಗ ನಗರದ ಹಳೇ ಡಿಸಿ ಸರ್ಕಲ್ ಬಳಿಯ ಹತ್ತಿ ಮಿಲ್ ಆಫೀಸ್ ಬಳಿ ಎಲೆಕ್ಟ್ರಿಕ್ ಸರ್ವಿಸ್ ವೈರ್ ಕಳ್ಳತ ಮಾಡುವಾಗ ಮೂರು ಜನ ಕಳ್ಳರಲ್ಲಿ ಓರ್ವನನ್ನು ಸಾರ್ವಜನಿಕರು ಸಾಕ್ಷಿ ಸಮೇತವಾಗಿ ಹಿಡಿದು ಗೂಸಾ ನೀಡಿದ್ದಾರೆ.
ಅಷ್ಟೊಂದು ಥಳಿಸಿದರು ತಗ್ಗೋದೆಯಿಲ್ಲ ಅಂತ ಪುಷ್ಪರಾಜ್ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದು, ನಗುತ್ತಿರುವ ಕಳ್ಳನ ಆಟಿಟ್ಯೂಡ್ ನೋಡಿ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ನಂತರ ಕಳ್ಳನನ್ನು ಗೂಸಾ ನೀಡಿ, ಪೊಲೀಸರಿಗೆ ಒಪ್ಪಿಸಿದರು.
ಈ ಖದೀಮರು ಕಳೆದ ಕೆಲ ದಿನಗಳಿಂದ ಹತ್ತಿಮಿಲ್, ಪೆಟ್ರೋಲ್ ಬಂಕ್, ಫಾನ್ ಶಾಪ್ ಸೇರಿದಂತೆ ಹಲವು ಕಡೆ ಸರ್ವಿಸ್ ವೈರ್, ಬ್ಯಾಟರಿ ಹಾಗೂ ಜೆಸಿಬಿ ಭಾಗಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿವೆ. ಕಳವಿನ ತಂತಿಯನ್ನು ಸುಟ್ಟು ಉಳಿದ ಲೋಹವನ್ನು ಕೇಜಿಗಟ್ಟಲೆ ಮಾರಾಟ ಮಾಡುತ್ತಿದ್ದ ಕಳ್ಳರು ಹಣ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ಭಾಗದಲ್ಲಿ ಹಲವು ಬಾರಿ ಕಳ್ಳತನವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಈ ಕಳ್ಳರ ಹಾವಳಿ ಕಡಿವಾಣ ಹಾಕಿ ಗಂಭೀರ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP