ಮಹದಾಯಿ ವಿವಾದ : ಜು. 31ರಿಂದ ನಿರಂತರ ಹೋರಾಟ-ಸಿದ್ದು ತೇಜಿ
ಹುಬ್ಬಳ್ಳಿ, 26 ಜುಲೈ (ಹಿ.ಸ.) : ಆ್ಯಂಕರ್ : ಮಹದಾಯಿ ನೀರಿನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಖಂಡಿಸಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹುಬ್ಬಳ್ಳಿಯ ಕಚೇರಿ ಎದುರು ಜುಲೈ 31 ರಿಂದ ನಿರಂತರ ಹೋರಾಟ ನಡೆಯಲಿದೆ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು
Siddu


ಹುಬ್ಬಳ್ಳಿ, 26 ಜುಲೈ (ಹಿ.ಸ.) :

ಆ್ಯಂಕರ್ : ಮಹದಾಯಿ ನೀರಿನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಖಂಡಿಸಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹುಬ್ಬಳ್ಳಿಯ ಕಚೇರಿ ಎದುರು ಜುಲೈ 31 ರಿಂದ ನಿರಂತರ ಹೋರಾಟ ನಡೆಯಲಿದೆ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಮಹದಾಯಿ ವಿಚಾರ ಕುರಿತ ಸಭೆಯಲ್ಲಿ ತೇಜಿ ಮಾತನಾಡಿ, “ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳಿಗೆ ಪರಿಸರ ಅನುಮತಿ ನೀಡಿಸುವಲ್ಲಿ ಸಚಿವ ಜೋಶಿ ಅವರು ವಿಫಲರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರನ್ನು ತಮಾಷೆಯಾಗಿ ನೋಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

1965 ರಿಂದಲೇ ನೀರಿಗಾಗಿ ಹೋರಾಟ ನಡೆಸುತ್ತಿರುವ ಉತ್ತರ ಕರ್ನಾಟಕದ ಜನರಿಗೆ ನ್ಯಾಯ ದೊರಕಿಸಬೇಕಾದ ಸಂದರ್ಭದಲ್ಲಿ, ಪ್ರಲ್ಹಾದ್ ಜೋಶಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಾ, ಮಹದಾಯಿ ವಿಷಯ ಬಂದಾಗ ಸುಮ್ಮನೆ ನಿಂತಿದ್ದಾರೆ ಎಂದು ಅವರು ಆರೋಪಿಸಿದರು.

2021ರಲ್ಲಿ 13.5 ಟಿಎಂಸಿ ನೀರಿಗೆ ಆದೇಶ ಬಂದರೂ, ಯೋಜನೆ ಇನ್ನೂ ಜಾರಿಗೆ ಬಾರದಿರುವುದನ್ನು ಅವರು ಪ್ರಶ್ನಿಸಿದರು. ಅಮಿತ್ ಶಾ ಅವರು ಚುನಾವಣಾ ಭರವಸೆ ನೀಡಿದ್ದರೂ, ಅದು ಈಡೇರಿಲ್ಲ ಎಂದು ತೇಜಿ ವಿಷಾದ ವ್ಯಕ್ತಪಡಿಸಿದರು.

ಹೋರಾಟಕ್ಕೆ ರೈತ ಸಂಘಟನೆಗಳು, ಕಟ್ಟಡ ಕಾರ್ಮಿಕ ಸಂಘ, ನಿವೃತ್ತ ಶಿಕ್ಷಕರ ಸಂಘ, ಆಟೋ ಚಾಲಕರ ಸಂಘ ಹಾಗೂ ಕೃಷಿ ಸಮಾಜ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಈ ಬಾರಿ ತಾರ್ಕಿಕ ಅಂತ್ಯ ಬರುವವರೆಗೆ ಹೋರಾಟ ನಿಲ್ಲದು, ಎಂದು ತೇಜಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande