ಬಳ್ಳಾರಿ, 26 ಜುಲೈ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರದಲ್ಲಿ ಹೆಚ್ಚಾಗಿರುವ ಶ್ವಾನಗಳ ಹಾವಳಿಯನ್ನು ನಿಯಂತ್ರಿಸಲು ಮಹಾನಗರ ಪಾಲಿಕೆಯು ಗುಗ್ಗರಹಟ್ಟಿಯ ವಾಟರ್ ಟ್ಯಾಂಕ್ ಬಳಿ `ಶ್ವಾನ ಸಂತಾನ ನಿಯಂತ್ರಣ ಹಾಗೂ ಕಲ್ಯಾಣ ಕೇಂದ್ರ'ವನ್ನು ಪ್ರಾರಂಭಿಸಿಸುರುವುದು ಸ್ವಾಗತಾರ್ಹ ಎಂದು ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ಅಂದಾಜು 25 ಸಾವಿರ ಶ್ವಾನಗಳಿವೆ. ಶ್ವಾನಗಳ ದಾಳಿ, ಕಡಿತದಿಂದ ರೇಬಿಸ್ ವೈರಸ್ ಹರಡಿ ಸಾಕಷ್ಟು ಸಮಸ್ಯೆ ಆಗುತ್ತಿದೆ. ಬಳ್ಳಾರಿ ಮಹಾನಗರ ಪಾಲಿಕೆ ಈ ಸಮಸ್ಯೆ ನಿವಾರಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಅಂದಾಜು 25 ಲಕ್ಷ ರೂ.ಗಳಲ್ಲಿ ಕಟ್ಟಡ ನಿರ್ಮಾಣ, ಕೇಂದ್ರದ ನಿರ್ವಹಣೆಗೆ 80 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುವುದು. ಅಸ್ರಾ ಸಂಸ್ಥೆಯು ಶ್ವಾನಗಳ ನಿಯಂತ್ರಣದ ಗುತ್ತಿಗೆಯನ್ನು ಪಡೆದಿದೆ. ಅಸ್ರಾ ಸಂಸ್ಥೆಯ ಸಿಬ್ಬಂದಿ 7 ಸಾವಿರ ಶ್ವಾನಗಳಿಗೆ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರಾದ ಮಿಂಚು ಸೀನ, ಮುಖಂಡರಾದ ಡಿ. ಸೂರಿ, ಸುಬ್ಬರಾಯುಡು, ನಾಗಲಕೆರೆ ಗೊವಿಂದ, ಗುಗ್ಗರಹಟ್ಟಿ ಅನ್ವರ್, ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ ಮುನಾಫ್ ಪಟೇಲ್, ಅಸ್ರಾ ಸಂಸ್ಥೆಯ ವಿನಯ್ ಮೊದಲಾದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್