ಗದಗ, 26 ಜುಲೈ (ಹಿ.ಸ.) :
ಆ್ಯಂಕರ್ : ಡೆಂಗ್ಯೂ, ಚಿಕುಂಗುನ್ಯ ರೋಗವು ಈಡಿಸ್ ಇಜಿಪ್ಟೆ ಸೊಳ್ಳೆಯು ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ , ಬ್ಯಾರಲ್ ಡ್ರಂಮ್ ಸಿಮೇಂಟ್‍ಡೋಣಿಯಲ್ಲಿ ಸಂಗ್ರಹಿಸಿದ ನೀರನ ತೊಟ್ಟಿಯಲ್ಲಿ ಟೀ-ಕಾಫಿ ಇತರೆ ಘನ ತ್ಯಾಜ್ಯದಲ್ಲಿ ಲಾರ್ವಾ (ಸೊಳ್ಳೆ) ಬೆಳೆಯುತ್ತವೆ ಆದ್ದರಿಂದ ಡೆಂಗೀ ಸೊಲಿಸಲು ಹೆಜ್ಜೆಗಳು “ಪರಿಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ” ಎಂಬ ಈ ವರ್ಷದ ಘೋಷವಾಕ್ಯವನ್ನು ಆರೋಗ್ಯ ಇಲಖೆಯ ಮಾಹಿತಿಯ ಉಪಯೋಗವನ್ನು ಪಡೆದು ಡೆಂಗೀ ತಡೆಗಟ್ಟಬೇಕು ಮತ್ತು ಯಾವುದೇ ಜ್ವರ ಸಮಸ್ಯೆ ಇದ್ದರೆ ರಕ್ತಪರೀಕ್ಷೆ ಮಾಡಿಕೊಳ್ಳಿರಿ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಾಯ್ ಎನ್ ಕಡೇಮನಿ ಹೇಳಿದರು.
ಅವರು ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಗದಗ, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಇವರುಗಳ ಸಂಯುಕ್ತಾಶ್ರಯದಲ್ಲಿ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಕುರುಬರ ಓಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಅಡ್ವೋಕೇಸಿ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಯ ಒಳಗೆ ನೀರು ತುಂಬುವ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಮತ್ತು ಮನೆಯ ಕಿಡಕಿಗಳಿಗೆ ಜಾಲರಿಗಳನ್ನು ಬಳಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೇಗಳನ್ನು ಬಳಸಬೇಕು, ಯಾವುದೇ ಜ್ವರ ಸಮಸ್ಯೆ ಇದ್ದರೆ ಆರೋಗ್ಯ ಕಾರ್ಯಕರ್ತರಲ್ಲಿ ಅಥವಾ ಆಶಾ ಕಾರ್ಯಕರ್ತೆಯರಲ್ಲಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಿರಿ ಮತ್ತು ಚಿಕಿತ್ಸೆ ಪಡಯಬೇಕೆಂದು ಹೇಳಿದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಶಾಂತಾ ಡೆಂಗ್ಯೂ ಜ್ವರದಲ್ಲಿ 3 ವಿಧಗಳು ಇವೆ ಅವುಯಾವವು ಎಂದರೆ 1.ಡೆಂಗ್ಯೂ ಜ್ವರ 2.ಡೆಂಗ್ಯೂ ರಕ್ತ ಸ್ರಾವ 3.ಡೆಂಗ್ಯೂ ಶಾಕ ಸಿಡ್ರೋಮ್ ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇರುವುದಿಲ್ಲಾ ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು ಅದಕ್ಕಾಗಿ ಈ ಒಂದು ರೋಗದ ಬಗ್ಗೆ ಜನರಿಗೆ ಹೆಚ್ಚಿಗೆ ಅರಿವನ್ನು ಮೂಡಿಸಬೇಕು ಆಶಾ ಕಾರ್ಯಕರ್ತೇಯರುಗಳಿಗಿಗೆ ಮತ್ತು ಮಳಿಯರಿಗೆ ಹೇಳಿದರು.
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಿದ್ದಪ್ಪ ಎನ್ ಲಿಂಗದಾಳ ಮಾತನಾಡಿ ಡೆಂಗ್ಯೂ ರೋಗ ಬರದ ಹಾಗೇ ಮುನ್ನೇಚರಿಕೆ ಕ್ರಮಗಳೆಂದರೆ 1. ಮನೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಸ್ವಚ್ಚವಾಗಿ ಇಡಬೇಕು ಮತ್ತು ಮನೆಯ ಒಳಗೆ ನೀರು ತುಂಬುವ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಮತ್ತು ಮನೆಯ ಕಿಡಕಿಗಳಿಗೆ ಜಾಲರಿಗಳನ್ನು ಬಳಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೇಗಳನ್ನು ಬಳಸಬೇಕು ಮತ್ತು ಸಾಯಂಕಾಲ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು 2. ರಾಸಾಯನಿಕ ವಿಧಾನ ಧೂಮೀಕರಣ ಮಾಡುವುದು: 3. ಜೈವಿಕ ನಿಯಂತ್ರಣ ಲಾರ್ವಾಹಾರಿ ಮೀನುಗಳನ್ನು ಸಾಕಾಣೆ ಮಾಡಿ ಲಾರ್ವಾ ನಾಶ ಪಡಿಸುವಂತಹ ಮಹತ್ವದ ಕಾರ್ಯವನ್ನು ಮಾಡಬೇಕಾಗಿದೆ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಪಾಲನೆ ನಾಡಬೇಂದು ಹೇಳಿದರು.
ಪ್ರಾಸ್ಥಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮುತ್ತಪ್ಪ ಹಟ್ಟಿಮನಿ ಮಾತನಾಡಿದರು ಕಾರ್ಯಕ್ರಮದಲ್ಲಿ ಶಿಕ್ಷಕರು ಆಶಾ ಕಾರ್ಯಕರ್ತೆಯರುಗಳು ಉಪಸ್ಥಿತರಿದ್ದರು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಗಂಗಮ್ಮ ಕುಂಬಾರ ನಿರೂಪಿಸಿದರು,ಗಾಯತ್ರಿ ಬಡಿಗೇರ ಸ್ವಾಗತಿಸಿದರು ಕೋನೆಯಲ್ಲಿ ಶೋಭಾ ಮನೆನ್ನವರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP