ಮಾಲೆ, 25 ಜುಲೈ (ಹಿ.ಸ.) :
ಆ್ಯಂಕರ್ : ಬ್ರಿಟನ್‌ಗೆ ಎರಡು ದಿನಗಳ ಅಧಿಕೃತ ಭೇಟಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‌ಗೆ ಆಗಮಿಸಿದ್ದಾರೆ. ಜುಲೈ 26 ರಂದು ನಡೆಯುವ ಮಾಲ್ಡೀವ್ಸ್‌ನ 60ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝು ಅಧಿಕಾರ ವಹಿಸಿಕೊಂಡ ನಂತರ ವಿದೇಶಿ ನಾಯಕನೊಬ್ಬರ ಮೊದಲ ಅಧಿಕೃತ ಭೇಟಿ. ಮೋದಿ ಅವರು ಇದಕ್ಕೂ ಮೊದಲು 2018 ಮತ್ತು 2019 ರಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ಭಾರತ–ಮಾಲ್ಡೀವ್ಸ್ ಸಂಬಂಧಗಳಲ್ಲಿ ಉಂಟಾದ ಉದ್ವಿಗ್ನತೆಗೆ ದಿಕ್ಕು ನೀಡಲು, ಪ್ರಧಾನಿ ಮೋದಿಯ ಈ ಭೇಟಿಗೆ ರಾಜತಾಂತ್ರಿಕ ಪ್ರಾಮುಖ್ಯತೆ ಇದೆ. 2024ರ ಅಕ್ಟೋಬರನಲ್ಲಿ ಮುಯಿಝು ಅವರು ಭಾರತಕ್ಕೆ ಭೇಟಿಯು ನಡೆಸಿದ ನಂತರ, ಭಾರತ $750 ಮಿಲಿಯನ್ ಕರೆನ್ಸಿ ವಿನಿಮಯ ಒಪ್ಪಂದದ ಮೂಲಕ ಮಾಲ್ಡೀವ್ಸ್‌ಗೆ ನೆರವಾಯಿತು. ಇದರಿಂದ ಎರಡು ದೇಶಗಳ ಸಂಬಂಧಗಳು ಪುನಃ ಸದೃಢವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa