ರಾಯಚೂರು, 22 ಜುಲೈ (ಹಿ.ಸ.) :
ಆ್ಯಂಕರ್ : ರಾಯಚೂರು ತಾಲೂಕಿನ ಯರಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರಿಗೆ ಜಲಜೀವನ್ ಮೀಷನ್ ಯೋಜನೆಯಡಿ ಆಗಸ್ಟ್ 02ರೊಳಗೆ ಗ್ರಾಮದ ಪ್ರತಿ ಮನೆಮನೆಗೆ ನಳದ ನೀರು ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಜರುಗಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರು ನಿರ್ದೇಶನ ನೀಡಿದರು.
ಜುಲೈ 22ರಂದು ಯರಗೇರಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಅನುμÁ್ಠನ ಮಾಡಿರುವ ಜಲಜೀವನ್ ಮೀಷನ್ ಯೋಜನೆಯ ಕಾಮಗಾರಿ ವೀಕ್ಷಣೆ ನಡೆಸಿ ಅವರು ಮಾತನಾಡಿದರು.
ನಳದ ಸಂಪರ್ಕವನ್ನು ಎಲ್ಲಾ ಮನೆಗಳಿಗೆ ಸರಿಯಾಗಿ ಕಲ್ಪಿಸಬೇಕು. ದೊಡ್ಡ ನಳ ಹಾಗೂ ಗುಣಮಟ್ಟ ನಳಗಳನ್ನು ಅಳವಡಿಸಬೇಕು ಎಂದು ಏಜೆನ್ಸಿಯವರಿಗೆ ಹಾಗೂ ಜೆಇ ಅವರಿಗೆ ಇದೆ ವೇಳೆ ಸಿಇಓ ಅವರು ನಿರ್ದೇಶನ ನೀಡಿದರು. ಮುಂದಿನ 10 ದಿನದೊಳಗಾಗಿ ಸಂಪೂರ್ಣವಾಗಿ ಅಂದಾಜು ಪಟ್ಟಿ ಪ್ರಕಾರ ಕೆಲಸ ಅನುμÁ್ಠನವಾಗÀಬೇಕು. 200 ಮನೆಗಳು ಹೆಚ್ಚುವರಿ ಇದ್ದರೆ ಅದನ್ನು ಪರಿಶೀಲಿಸಿ ಸೂಕ್ತ ಕ್ರಮವಹಿಸಬೇಕು ಎಂದು ಸಹಾಯಕ ಅಭಿಯಂತರರಿಗೆ ನಿರ್ದೇಶನ ನೀಡಿದರು. ಇದನ್ನು ಪರಿಶೀಲಿಸಿ ಹಸ್ತಾಂತರ ಮಾಡಿಕೊಳ್ಳಬೇಕೆಂದು ಪಿಡಿಓ ಅವರಿಗೆ ಸೂಚಿಸಿದರು. ಇದು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದರು.
ಗ್ರಾಮದಲ್ಲಿ ಎಷ್ಟು ವಾರ್ಡಗಳಿವೆ. ಎಫ್.ಟಿ.ಕೆ ಕಿಟ್ ಮುಖಾಂತರ ಎಷ್ಟು ನೀರಿನ ಮೂಲಗಳನ್ನು ಪರೀಕ್ಷೆ ಮಾಡಿಸಿದ್ದೀರಿ ಎಂದು ಇದೆ ವೇಳೆ ಸಿಇಓ ಅವರು ಪಿಡಿಓ ಅವರಿಗೆ ಪ್ರಶ್ನಿಸಿದರು. 15 ದಿನಗಳ ಹಿಂದೆ ಎಫ್.ಟಿ.ಕೆ ಕಿಟ್ ಮೂಲಕ ಪರೀಕ್ಷೆ ಮಾಡಿಸಿದ್ದೇವೆ. ಜೆಜೆಎಮ್ ಟ್ರಯಲ್ ರನ್ ಆಗಿಲ್ಲ. ಜೆಜೆಎಮ್ ಪೈಪಲೈನ್ ಮೂಲಕ ನೀರು ಹೋಗುವುದಿಲ್ಲ. ಹಳೆ ಪೈಪಲೈನ್ ಮೂಲಕ ನೀರು ಸರಬರಾಜು ಅಗುತ್ತಿದೆ ಎಂದು ಪಿಡಿಓ ಪ್ರತಿಕ್ರಿಯಿಸಿದರು.
ಪಿಡಿಓ, ಜೆಇಗೆ ಎಚ್ಚರಿಕೆ: ಕೆಲವೊಂದು ಏರಿಯಾಗಳಲ್ಲಿ ಮಾತ್ರ ಟ್ರಯಲ್ ರನ್ ಮಾಡಿದ್ದೇವೆ ಎಂದು ಜೆಇ ದೊಡ್ಡಬಸಪ್ಪ ತಿಳಿಸಿದರು. ತಾವುಗಳು ನೀಡುವ ಮಾಹಿತಿಯಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಪಿಡಿಓ ಮತ್ತು ಜೆಇ ನಡುವೆ ಸಮನ್ವಯ ಇರುವುದಿಲ್ಲ ಎಂಬುದು ಕಂಡು ಬರುತ್ತಿದೆ. ಇದು ಸರಿಯಲ್ಲ. ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಇದೆ ವೇಳೆ ಸಿಇಓ ಅವರು ಎಚ್ಚರಿಕೆ ನೀಡಿದರು.
ವಾರದ ಗಡುವು: ಒಂದು ವರ್ಷವಾದರೂ ಜೆಜೆಎಮ್ ಕಾಮಗಾರಿಗಳು ಮುಗಿಯದೇ ಇರುವುದಕ್ಕೆ ಕೆಡಿಪಿ ಹಾಗೂ ಇನ್ನಿತರೇ ಸಭೆಗಳಲ್ಲಿ ಚರ್ಚೆಯಾಗುತ್ತಿದೆ. ನಿರಂತರ ಅನುಸರಣೆ ಮಾಡಿ ವಾರದಲ್ಲಿ ನಿರಂತರವಾಗಿ ಕೆಲಸ ಮಾಡಿ ಜೆಜೆಎಮ್ ಕಾಮಗಾರಿ ಪೂರ್ಣಗೊಳಿಸುವಂತೆ ಸಹಾಯಕ ಅಭಿಯಂತರರಿಗೆ ಇದೆ ವೇಳೆ ಸಿಇಓ ಅವರು ಗಡುವು ವಿದಿಸಿದರು.
ಜೆಜೆಎಮ್ ಕಾಮಗಾರಿ ಸ್ಥಳದಲ್ಲಿ ಅಥವಾ ರೋಡ್ ಕಟ್ಟಿಂಗ್ ಮಾಡಿದ ಸ್ಥಳದಲ್ಲಿ ವಾರದೊಳಗೆ ಗುಣಮಟ್ಟದ ರಸ್ತೆ ನಿರ್ಮಿಸಿ ಸರಿಯಾಗಿ ಕೆಲಸ ಮಾಡಬೇಕು. ನೀರಿನ ಪ್ರಮಾಣ ಸರಿಯಾಗಿ ಪರಿಶೀಲಿಸಿ ಮನೆಗಳಿಗೆ ನೀರು ಸರಾಗವಾಗಿ ಹೋಗುವಂತಾಗಬೇಕು ಎಂದು ಇದೆ ವೇಳೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಜೆಇ ಹಾಗೂ ಏಜೆನ್ಸಿಯವರಿಗೆ ಸೂಚನೆ ನೀಡಿದ ಸಿಇಓ ಅವರು, ಜೆಜೆಎಂ ಕಾಮಗಾರಿಯನ್ನು ಗಂಭೀರವಾಗಿ ಪರಿಗಣಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ, ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ನಿರ್ದೇಶಕರು, ಸಹಾಯಕ ಅಭಿಯಂತರರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಐಇಸಿ ಸಂಯೋಜಕರು ಹಾಗೂ ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್