ಉಪರಾಷ್ಟ್ರಪತಿ ಜಗದೀಪ್ ಧಂಖರ್ ರಾಜೀನಾಮೆ : ಪ್ರತಿಪಕ್ಷಗಳಿಂದ ಪ್ರಶ್ನೆಗಳ ಸುರಿಮಳೆ
ನವದೆಹಲಿ, 22 ಜುಲೈ (ಹಿ.ಸ.) : ಆ್ಯಂಕರ್ : ಸಂಸತ್‌ ಅಧಿವೇಶನದ ನಡುವೆ ರಾಜ್ಯ ಸಭಾಧ್ಯಕ್ಷ ಜಗದೀಪ್ ಧಂಖರ್ ಅವರು ತಮ್ಮ ಸ್ಥಾನಕ್ಕೆ ನೀಡಿದ ದಿಢೀರ್ ರಾಜೀನಾಮೆ ಇದೀಗ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಕುರಿತು ಪ್ರತಿಪಕ್ಷಗಳ ನಾಯಕರು ಈ ನಿರ್ಧಾರ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ
Accept


ನವದೆಹಲಿ, 22 ಜುಲೈ (ಹಿ.ಸ.) :

ಆ್ಯಂಕರ್ : ಸಂಸತ್‌ ಅಧಿವೇಶನದ ನಡುವೆ ರಾಜ್ಯ ಸಭಾಧ್ಯಕ್ಷ ಜಗದೀಪ್ ಧಂಖರ್ ಅವರು ತಮ್ಮ ಸ್ಥಾನಕ್ಕೆ ನೀಡಿದ ದಿಢೀರ್ ರಾಜೀನಾಮೆ ಇದೀಗ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಕುರಿತು ಪ್ರತಿಪಕ್ಷಗಳ ನಾಯಕರು ಈ ನಿರ್ಧಾರ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಧಂಖರ್ ಅವರ ರಾಜೀನಾಮೆಯನ್ನು ವ್ಯವಹಾರ ಸಲಹಾ ಸಮಿತಿಯ ಎರಡನೇ ಸಭೆಯ ಸಂದರ್ಭದೊಂದಿಗೆ ಹೋಲಿಸಿದ್ದು. ಅವರ ಪ್ರಕಾರ, ನಿನ್ನೆ ಮಧ್ಯಾಹ್ನ 12:30 ಕ್ಕೆ ನಡೆದ ಬಿಎಸಿ ಸಭೆಯಲ್ಲಿ ಧಂಖರ್ ಅಧ್ಯಕ್ಷತೆ ವಹಿಸಿದ್ದರು. ಆದರೆ ಸಂಜೆ 4:30 ಕ್ಕೆ ನಡೆದ ಸಭೆಗೆ ಇಬ್ಬರೂ ಪ್ರಮುಖ ಬಿಜೆಪಿ ನಾಯಕರು ಗೈರುಹಾಜರಾಗಿದ್ದರು. ಇದರಿಂದ ಧಂಖರ್ ಅಸಹನೆಗೊಂಡು ರಾಜೀನಾಮೆ ನೀಡಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಈ ರಾಜೀನಾಮೆಯನ್ನು ಸೋವಿಯತ್ ಶೈಲಿಯ ನಿರ್ಧಾರವೆಂದು ವ್ಯಂಗ್ಯವಾಡಿದರು. ಹಿರಿಯ ಅಧಿಕಾರಿಗಳನ್ನು ಹಠಾತ್ ಬದಲಾಯಿಸುವ ಶೈಲಿಗೆ ಇದು ಸಾಮಾನ್ಯ ಉದಾಹರಣೆ ಎಂದು ಅವರು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಇದನ್ನು ಧಂಖರ್ ಅವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ. ಆದರೆ, ಬಿಜೆಪಿ ಮತಗಳನ್ನು ವಿಭಜಿಸಲು ತಂತ್ರಗಳು ಜಾರಿಯಲ್ಲಿವೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.

ಧಂಖರ್ ಅವರ ರಾಜೀನಾಮೆ ದುರ್ಬಾಗ್ಯಕರ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅಭಿಪ್ರಾಯಪಟ್ಟರು. ಇಂತಹ ಗಂಭೀರ ಬೆಳವಣಿಗೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇನ್ನೂ ಯಾವುದೇ ಸ್ಪಷ್ಟನೆ ನೀಡದಿರುವುದು ಕಳವಳಕಾರಿ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande