ಕೊಪ್ಪಳ, 22 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಜು. 25ರಂದು ಬೆಳಿಗ್ಗೆ 9 ಗಂಟೆಗೆ ಕುಷ್ಟಗಿ ರಸ್ತೆಯ ಟಣಕನಕಲ್ ಗ್ರಾಮದಲ್ಲಿರುವ ಕೊಪ್ಪಳ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.
ಈ ಕ್ಯಾಂಪಸ್ ಸಂದರ್ಶನದಲ್ಲಿ ಪ್ರತಿಷ್ಠಿತ ಕಂಪನಿಯಾದ ಮೆ.||ಜಿಂದಾಲ್ ಸ್ಟೀಲ್ ವರ್ಕ್ಸ ಲಿಮಿಟೆಡ್, ತೋರಣಗಲ್-ಬಳ್ಳಾರಿ, ಕಿರ್ಲೋಸ್ಕರ್ ಫೆರಸ್ ಇಂಡಸ್ಟೀಸ್ ಲಿಮಿಟೆಡ್ ಗಿಣಿಗೇರ-ಕೊಪ್ಪಳ ಹಾಗೂ ಬೆಂಗಳೂರು ಹಾಗೂ ಕೊಪ್ಪಳ ಮೂಲದ ಇನ್ನಿತರೆ ಕೈಗಾರಿಕೆಗಳು ಭಾಗವಹಿಸುತ್ತಿದ್ದು, ಐಟಿಐ ಪಾಸ್ ಆದ ಹಾಗೂ ಪ್ರಸ್ತುತ ಎರಡನೇಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಎಲೆಕ್ಟ್ರಿಷಿಯನ್, ಫಿಟ್ಟರ್, ಟರ್ನರ್, ಮೆಕಾನಿಕ್ ಮೋಟರ್ ವಹಿಕಲ್, ಮೆಕಾನಿಕ್ ಡಿಸೈಲ್, ಟೂಲ್ಸ್ & ಡೈ ಮೇಕಿಂಗ್ & ವೇಲ್ಡರ್, ಮಷಿನಿಸ್ಟ್ ವೃತ್ತಿಗಳ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿ (ಅಪ್ರೇಂಟಿಶಿಪ್ ಟ್ರೈನಿಂಗ್)ಗಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಆಸಕ್ತರು ತಮ್ಮ ಆಧಾರ್ ಕಾರ್ಡ, ಫೋಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಹಾಗೂ 2 ಸೆಟ್ ಝೆರಾಕ್ಸ್ ಪ್ರತಿಗಳೊಂದಿಗೆ ಈ ಸಂದರ್ಶನಕ್ಕೆ ಹಾಜರಾಗಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಟಣಕನಕಲ್, ಕುಷ್ಟಗಿ ರಸ್ತೆ, ಕೊಪ್ಪಳ), ಇಲ್ಲಿಗೆ ಅಥವಾ ಮೊಬೈಲ್ ಸಂಖ್ಯೆ: 9449134905, 8660977220, 9008536895, 9448813422, 9742532353, 9945577155, 9945672606 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಸರ್ಕಾರಿ ಐಟಿಐ ಪ್ರಾಚಾರ್ಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್