ಕೂಸಿನ ಮನೆ ಕಾರ್ಯನಿರ್ವಹಣೆ : ಮೊಬೈಲ್ ಕ್ರಷ್ ಸಂಸ್ಥೆ ಸಿಬ್ಬಂದಿ ಭೇಟಿ
ಕೊಪ್ಪಳ, 22 ಜುಲೈ (ಹಿ.ಸ.) : ಆ್ಯಂಕರ್ : ಕೊಪ್ಪಳ ತಾಲೂಕಿನಲ್ಲಿ ನಡೆಯುತ್ತಿರುವ ಕೂಸಿನ ಮನೆ ಪರಿಶೀಲನೆಗಾಗಿ ಮೊಬೈಲ್ ಕ್ರಷ್ ಸಂಸ್ಥೆಯ ಸಿಬ್ಬಂದಿಗಳಾದ ವಿಜಯಲಕ್ಷ್ಮೀ, ಚಿದಾನಂದ ಸ್ವಾಮಿ ಹಾಗೂ ಮತ್ತಿತರರು ಕೊಪ್ಪಳ ತಾಲೂಕಿನ ಅಳವಂಡಿ, ಹಟ್ಟಿ, ಬೋಚನಹಳ್ಳಿ, ಕವಲೂರು, ಹಿಟ್ನಾಳ, ಬೇವಿನಹಳ್ಳಿ, ಬಂಡಿಹ
ಕೂಸಿನ ಮನೆ ಕಾರ್ಯನಿರ್ವಹಣೆ: ಮೊಬೈಲ್ ಕ್ರಷ್ ಸಂಸ್ಥೆಯ ಸಿಬ್ಬಂದಿ ಭೇಟಿ


ಕೊಪ್ಪಳ, 22 ಜುಲೈ (ಹಿ.ಸ.) :

ಆ್ಯಂಕರ್ : ಕೊಪ್ಪಳ ತಾಲೂಕಿನಲ್ಲಿ ನಡೆಯುತ್ತಿರುವ ಕೂಸಿನ ಮನೆ ಪರಿಶೀಲನೆಗಾಗಿ ಮೊಬೈಲ್ ಕ್ರಷ್ ಸಂಸ್ಥೆಯ ಸಿಬ್ಬಂದಿಗಳಾದ ವಿಜಯಲಕ್ಷ್ಮೀ, ಚಿದಾನಂದ ಸ್ವಾಮಿ ಹಾಗೂ ಮತ್ತಿತರರು ಕೊಪ್ಪಳ ತಾಲೂಕಿನ ಅಳವಂಡಿ, ಹಟ್ಟಿ, ಬೋಚನಹಳ್ಳಿ, ಕವಲೂರು, ಹಿಟ್ನಾಳ, ಬೇವಿನಹಳ್ಳಿ, ಬಂಡಿಹರ್ಲಾಪುರ, ಹುಲಿಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಕೂಸಿನ ಮನೆಯ ಕಾರ್ಯನಿರ್ವಹಣೆ, ಮಕ್ಕಳಿಗೆ ಆಹಾರ ವಿತರಣೆ, ಆರೋಗ್ಯ ತಪಾಸಣೆ, ಕೆರ್ ಟೆಕರ್‌ಗಳಿಗೆ ವೇತನ ಪಾವತಿಯಾಗಿರುವ ಕುರಿತು ಪರಿಶೀಲಿಸಿ ಅಗತ್ಯ ಸಲಹೆ ನೀಡಿದರು.

ಕೂಸಿನ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆರ್‌ಟೆಕರ್ಗಳು ಅಗತ್ಯ ದಾಖಲಾತಿಗಳನ್ನು ಪ್ರತಿ ದಿನ ಅಪಡೇಟ್ ಮಾಡುವಂತೆ ತಿಳಿಸಿದರು. ಮಕ್ಕಳಿಗೆ ಪ್ರತಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಜರುಗಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದವರಿಗೆ ಮಾಹಿತಿ ನೀಡಲು ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ವಿಷಯ ನಿರ್ವಾಹಕ ಬಸವರಾಜ ಬಳಿಗಾರ, ರಾಜೀವಗಾಂಧಿ ಫೆಲೋ ಸೌಜನ್ಯ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಸಂಜಯ, ರತ್ನಾ, ಅನಿತಾ ಕಿಲ್ಲೆದ, ರವಾಸಾಹೇಬ, ಗುರುದೇವಮ್ಮ, ಕೃಷ್ಣಮೂರ್ತಿ, ಗೀತಾ ಕುಮಾರಿ, ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಮಂಜುನಾಥಯ್ಯ, ಸಣ್ಣಜಂಬಣ್ಣ, ಕೆರ್‌ಟೆಕರ್‌ಗಳು, ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande