ಜು.25, 26 ರಂದು ಕಾರ್ಗಿಲ್ ವಿಜಯ ದಿವಸ್ ದಿನಾಚರಣೆ
ಬಳ್ಳಾರಿ, 22 ಜುಲೈ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಮಾಜಿ ಸೈನಿಕರು ಮತ್ತು ವೀರ ನಾರಿಯರ ಕಲ್ಯಾಣ ಸಮಿತಿ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಬಲಿಕೊಟ್ಟ ವೀರಯೋಧರ ಸ್ಮರಣೆ ಹಾಗೂ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು 26 ನೇ ಕಾರ್ಗಿಲ್ ವಿಜಯ ದಿವಸ್ ದಿನಾಚರಣೆಯ ಸಮಾರಂಭವನ್ನು ಜು.2
ಜು.25, 26 ರಂದು ಕಾರ್ಗಿಲ್ ವಿಜಯ ದಿವಸ್ ದಿನಾಚರಣೆ


ಬಳ್ಳಾರಿ, 22 ಜುಲೈ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಮಾಜಿ ಸೈನಿಕರು ಮತ್ತು ವೀರ ನಾರಿಯರ ಕಲ್ಯಾಣ ಸಮಿತಿ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಬಲಿಕೊಟ್ಟ ವೀರಯೋಧರ ಸ್ಮರಣೆ ಹಾಗೂ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು 26 ನೇ ಕಾರ್ಗಿಲ್ ವಿಜಯ ದಿವಸ್ ದಿನಾಚರಣೆಯ ಸಮಾರಂಭವನ್ನು ಜು.25 ಮತ್ತು 26 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಜು.25 ರಂದು ಸಂಜೆ 06 ಗಂಟೆಗೆ ನಗರದ ಎಸ್‍ಪಿ ವೃತ್ತದಿಂದ ದುರ್ಗಮ್ಮ ಗುಡಿಯ ಮೂಲಕ ಎಸ್‍ಪಿ ಕಚೇರಿಯ ಮುಂಭಾಗದ ಅಮರ್ ಜವಾನ್ ಯುದ್ದ ಸ್ಮಾರಕದವರೆಗೆ ಮೇಣದ ಬತ್ತಿಯೊಂದಿಗೆ ಪಾದಯಾತ್ರೆ ನಡೆಸಿ, ಸ್ಮಾರಕಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಗುವುದು.

ಜು.26 ರಂದು ಬೆಳಿಗ್ಗೆ 09 ಗಂಟೆಗೆ ಎಸ್‍ಪಿ ಕಚೇರಿಯ ಮುಂಭಾಗದ ಅಮರ್ ಜವಾನ್ ಯುದ್ಧ ಸ್ಮಾರಕಕ್ಕೆ ಗಣ್ಯರು, ಮಾಜಿ ಸೈನಿಕರು, ವೀರ ನಾರಿಯರು, ಅರೆಸೇನಾಪಡೆ ಹಾಗೂ ಸಾರ್ವಜನಿಕರಿಂದ ಪುಷ್ಪಗುಚ್ಛ ಮತ್ತು ಹೂವಿನ ಮಾಲಾರ್ಪಣೆ ಮಾಡಲಾಗುವುದು. ಸಾರ್ವಜನಿಕರು ಪಾಲ್ಗೊಳ್ಳಬಹುದು ಎಂದು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande