ಹಾರ್ವರ್ಡ್ ನಿಧಿ ಪ್ರಕರಣ : ನ್ಯಾಯಾಧೀಶರ ವಿರುದ್ಧ ಟ್ರಂಪ್ ವಾಗ್ದಾಳಿ
ವಾಷಿಂಗ್ಟನ್, 22 ಜುಲೈ (ಹಿ.ಸ.) : ಆ್ಯಂಕರ್ : ಹಾರ್ವರ್ಡ್ ವಿಶ್ವವಿದ್ಯಾಲಯದ 2.6 ಬಿಲಿಯನ್ ಡಾಲರ್‌ಗಳ ಫೆಡರಲ್ ನಿಧಿ ಕಡಿತ ವಿಚಾರಣೆಯ ವೇಳೆ ನ್ಯಾಯಾಧೀಶೆ ಅಲಿಸನ್ ಬರೋಸ್ ತಕ್ಷಣದ ತೀರ್ಪು ನೀಡಲು ನಿರಾಕರಿಸಿದ ಹಿನ್ನೆಲೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲಿಸನ್ ಬರ
ಹಾರ್ವರ್ಡ್ ನಿಧಿ ಪ್ರಕರಣ : ನ್ಯಾಯಾಧೀಶರ ವಿರುದ್ಧ ಟ್ರಂಪ್ ವಾಗ್ದಾಳಿ


ವಾಷಿಂಗ್ಟನ್, 22 ಜುಲೈ (ಹಿ.ಸ.) :

ಆ್ಯಂಕರ್ : ಹಾರ್ವರ್ಡ್ ವಿಶ್ವವಿದ್ಯಾಲಯದ 2.6 ಬಿಲಿಯನ್ ಡಾಲರ್‌ಗಳ ಫೆಡರಲ್ ನಿಧಿ ಕಡಿತ ವಿಚಾರಣೆಯ ವೇಳೆ ನ್ಯಾಯಾಧೀಶೆ ಅಲಿಸನ್ ಬರೋಸ್ ತಕ್ಷಣದ ತೀರ್ಪು ನೀಡಲು ನಿರಾಕರಿಸಿದ ಹಿನ್ನೆಲೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಲಿಸನ್ ಬರೋಸ್ ಸಂಪೂರ್ಣ ವಿಪತ್ತು, ನಾನು ಅವರ ತೀರ್ಪನ್ನೇ ಕೇಳದೇ ಹೇಳುತ್ತೇನೆ ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಅವರು ಯೆಹೂದ್ಯ, ಕ್ರಿಶ್ಚಿಯನ್ ಹಾಗೂ ಅಮೆರಿಕ ವಿರೋಧಿ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ, ಹಾರ್ವರ್ಡ್ ವಿಶ್ವವಿದ್ಯಾಲಯವು ಶೈಕ್ಷಣಿಕ ಸ್ವಾತಂತ್ರ್ಯದ ಮೇಲೆ ಸರ್ಕಾರ ಹಣದ ಮೂಲಕ ಒತ್ತಡ ಹೇರುತ್ತಿದೆ ಎಂದು ನ್ಯಾಯಾಲಯದಲ್ಲಿ ವಾದಿಸಿತ್ತು. ನ್ಯಾಯಾಧೀಶೆ ಬರೋಸ್ ತೀರ್ಪು ಮುಂದೂಡಿದ್ದು, ಶೀಘ್ರದಲ್ಲೇ ಲಿಖಿತ ತೀರ್ಪು ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande