ಬಳ್ಳಾರಿ, 22 ಜುಲೈ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಡೇಟಾ ಸೆಂಟರ್‍ನಲ್ಲಿ ಹಳೆಯ ಸ್ಟೋರೇಜ್ ವ್ಯವಸ್ಥೆ ಬದಲು ಹೊಸದಾಗಿ ಹೆಚ್ಚಿನ ಸಾಮರ್ಥ್ಯ ಸಂಗ್ರಹಣ ವ್ಯವಸ್ಥೆ ಅಳವಡಿಸುವ ಕಾರ್ಯ ಕೈಗೊಳ್ಳಲಾಗುತ್ತಿರುವುದರಿಂದ ಜು.25 ರ ಸಂಜೆ 8.30 ರಿಂದ ಜು.27 ರಂದು ರಾತ್ರಿ 10 ಗಂಟೆಯವರೆಗೆ ಬಳ್ಳಾರಿ ನಗರ ವ್ಯಾಪ್ತಿಯ ಐಪಿಡಿಎಸ್ ನ ನಗದು ಸೇವೆ, ಹೊಸ ವಿದ್ಯುತ್ ಸಂಪರ್ಕ ಸೇವೆ ಹಾಗೂ ಉಳಿದ ಎಲ್ಲಾ ಆನ್‍ಲೈನ್ ಮತ್ತು ಆಫ್‍ಲೈನ್ ಸೇವೆಗಳಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್