ಫರಿದಾಬಾದ್‌ನಲ್ಲಿ 3.2 ತೀವ್ರತೆಯ ಭೂಕಂಪ
ಫರಿದಾಬಾದ್, 22 ಜುಲೈ (ಹಿ.ಸ.) : ಆ್ಯಂಕರ್ : ಹರಿಯಾಣದ ಫರಿದಾಬಾದ್‌ನಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪ ಭೂಮಿಯಿಂದ ಐದು ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಜನತೆ ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ. ಇದಕ್ಕೂ ಮೊದಲು, ಜುಲೈ 16 ರಂದು ರೋಹ್ಟಕ್‌ನಲ್ಲಿ 3.3 ತೀ
Earthquake


ಫರಿದಾಬಾದ್, 22 ಜುಲೈ (ಹಿ.ಸ.) :

ಆ್ಯಂಕರ್ : ಹರಿಯಾಣದ ಫರಿದಾಬಾದ್‌ನಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪ ಭೂಮಿಯಿಂದ ಐದು ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಜನತೆ ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ.

ಇದಕ್ಕೂ ಮೊದಲು, ಜುಲೈ 16 ರಂದು ರೋಹ್ಟಕ್‌ನಲ್ಲಿ 3.3 ತೀವ್ರತೆಯ ಭೂಕಂಪ ಹಾಗೂ ಜುಲೈ 11 ರಂದು ಝಜ್ಜರ್‌ನಲ್ಲಿ 3.7 ತೀವ್ರತೆಯ ಕಂಪನ ದಾಖಲಾಗಿದೆ. ಜುಲೈ 10ರಂದು ಝಜ್ಜರ್‌ನಲ್ಲಿ ಎರಡು ಭೂಕಂಪಗಳು ಎರಡು ನಿಮಿಷಗಳ ಅಂತರದಲ್ಲಿ ಸಂಭವಿಸಿದ್ದವು.

ರಾಜ್ಯದಲ್ಲಿ ಈ ಮಧ್ಯಂತರದ ಭೂಕಂಪಗಳು ಭೂವೈಜ್ಞಾನಿಕ ಚಟುವಟಿಕೆ ಗಂಭೀರವಾಗಿದೆ ಎಂಬ ಆತಂಕ ಉಂಟುಮಾಡಿದೆ. ಜನತೆಗೆ ಸಾವು-ನೋವು ವರದಿಯಾಗದಿದ್ದರೂ, ಭದ್ರತೆಗಾಗಿ ಸತತ ನಿಗಾವಹಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande