ಬಳ್ಳಾರಿ, 21 ಜುಲೈ (ಹಿ.ಸ.) :
ಆ್ಯಂಕರ್ : ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಹೊರವಲಯದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿ ಮತ್ತು ಜೋಳವನ್ನು ಗ್ರಾಮೀಣ ಪೆÇಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.
ಆಹಾರ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಂಗನಕಲ್ಲು ಗ್ರಾಮದ ಗೋಡಾನ್‍ನಲ್ಲಿ 282 ಚೀಲ ಪಡಿತರ ಅಕ್ಕಿ (112.80 ಕ್ವಿಂಟಾಲ್) ಅಂದಾಜು ಬೆಲೆ 2,59,440 ರೂ.ಗಳು ಮತ್ತು ಜೋಳ 98 ಚೀಲ, (49 ಕ್ವಿಂಟಾಲ್) ಅಂದಾಜು ಮೌಲ್ಯ 1,63.170 ರೂ. ಮೊತ್ತದ ಆಹಾರ ಧಾನ್ಯಗಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮ ದಾಸ್ತನು ಮಾಡಿರುವ ವಿಶ್ವನಾಥಗೌಡ ಹಾಗು ಗೋಡಾನ್ ಮಾಲೀಕರ ವಿರುದ್ದ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್