ವಿಜಯಪುರ, 21 ಜುಲೈ (ಹಿ.ಸ.) :
ಆ್ಯಂಕರ್ : ಬೀಳಗಿ ಪಟ್ಟಣದಲ್ಲಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ತಾಲೂಕಿನ 50 ಕ್ಕು ಹೆಚ್ಚು ಯುವಕರು ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘಟನೆಗೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ಗಣೇಶ ನಾಯಕ, ಬೀಳಗಿ ತಾಲ್ಲೂಕಿನ ಮುಖಂಡರುಗಳಾದ ಈಶ್ವರ ದೊಡಮನಿ, ಪರಶುರಾಮ ಭಜಂತ್ರಿ, ಪರಶುರಾಮ ಕಲಾದಗಿ, ಯಾಸಿನ, ಸಂತೋಷ, ಬೀರಪ್ಪ, ಶ್ರೀನಿವಾಸ ಮಹಿಳಾ ಮುಖಂಡರಾದ ಮಂಜುಳಾ ಮೇರಾಕರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande