ಶಾಸಕ ಕಾಸಪ್ಪನವರಗೆ ಶಾಸಕ ಯತ್ನಾಳ ತಿರುಗೇಟು
ವಿಜಯಪುರ, 21 ಜುಲೈ (ಹಿ.ಸ.) : ಆ್ಯಂಕರ್ : ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ವಿರುದ್ಧ ಹತ್ಯೆ ಸಂಚಿನ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ಅದರ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರನ್ನೆ ಕೇಳಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸ್ವಾಮಿಜಿಗಳಿಗಾ
ಯತ್ನಾಳ


ವಿಜಯಪುರ, 21 ಜುಲೈ (ಹಿ.ಸ.) :

ಆ್ಯಂಕರ್ : ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ವಿರುದ್ಧ ಹತ್ಯೆ ಸಂಚಿನ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ಅದರ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರನ್ನೆ ಕೇಳಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸ್ವಾಮಿಜಿಗಳಿಗಾಗಿ 15 ಎಕರೆ ಜಮೀನು ತಗೆದುಕೊಂಡು ಹಾಸ್ಟೆಲ್ ಸಮೇತ ಮಠದ ವ್ಯವಸ್ಥೆ ಮಾಡುತ್ತೇವೆ. ಅದರ ಬಗ್ಗೆ ಬುಧವಾರ ನಾನು, ಶಾಸಕ ಸಿ ಸಿ ಪಾಟೀಲ ಸೇರಿದಂತೆ ಅನೇಕರು ಸೇರಿ ಸಭೆ ಮಾಡುತ್ತೆವೆ. ಶ್ರೀಗಳು ಅಲ್ಲಿ ಬಂದು ಇರಲಿದ್ದಾರೆ. ಈ ಬಾರಿ ಯಾವುದೇ ರಾಜಕಾರಣಿ ಟ್ರಸ್ಟ್‌‌ನಲ್ಲಿ ಇರಲ್ಲ. ಕೇವಲ ಭಕ್ತರು ಮಾತ್ರ ಟ್ರಸ್ಟ್‌‌ನಲ್ಲಿ ಇರುತ್ತಾರೆ ಎಂದರು. ಇನ್ನು ಶಾಸಕ ವಿಜಯಾನಂದ

ಕಾಶಪ್ಪನವರ ಯಾರು ಅವರನ್ನು ಹೊರಹಾಕೋಕೆ. ಸ್ವಾಮಿಜಿಗಳ ಜೊತೆ ಭಕ್ತರಿದ್ದಾರೆ ಎಂದು ತಿರುಗೇಟು ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande