150 ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಿಸಿದ ಶಾಸಕ ಬಿ.ನಾಗೇಂದ್ರ
ಬಳ್ಳಾರಿ, 21 ಜುಲೈ (ಹಿ.ಸ.) : ಆ್ಯಂಕರ್ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ 2022-23 ನೇ ಸಾಲಿನ ಸಚಿವರ ವಿಶೇಷ ಅನುದಾನದಡಿ ದ್ವಿಚಕ್ರ ವಾಹನ ಪಡೆಯಲು ಆಯ್ಕೆಯಾದ 150 ಫಲಾನುಭವಿಗಳಿಗೆ ಬಳ್ಳಾರಿ ತಾಲ್ಲೂಕು ಪಂಚಾಯತಿ ಕ
150 ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಿಸಿದ ಶಾಸಕ ಬಿ.ನಾಗೇಂದ್ರ


ಬಳ್ಳಾರಿ, 21 ಜುಲೈ (ಹಿ.ಸ.) :

ಆ್ಯಂಕರ್ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ 2022-23 ನೇ ಸಾಲಿನ ಸಚಿವರ ವಿಶೇಷ ಅನುದಾನದಡಿ ದ್ವಿಚಕ್ರ ವಾಹನ ಪಡೆಯಲು ಆಯ್ಕೆಯಾದ 150 ಫಲಾನುಭವಿಗಳಿಗೆ ಬಳ್ಳಾರಿ ತಾಲ್ಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರು ದ್ವಿಚಕ್ರ ವಾಹನಗಳನ್ನು ಸೋಮವಾರ ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿಗಳ ಮೂಲಕ ವಾರ್ಷಿಕವಾಗಿ 62 ಸಾವಿರ ಕೋಟಿ ರೂ. ಅನುದಾನ ಜನರಿಗೆ ನೀಡಲಾಗುತ್ತಿದೆ. ಜನರೇ ಮೆಚ್ಚಿ ಹೊಗಳುವಂಥಹ ಕೆಲಸ ಆಗುತ್ತಿದೆ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ ಮಾರಾಟ, ಜೂಜು ದಂಧೆಗಳಿಗೆ ಕಡಿವಾಣ ಹಾಕಲು ‘ಮನೆ-ಮನೆಗೆ ಪೊಲೀಸ್’ ಆರಂಭವಾಗಿದೆ ಎಂದರು.

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ಎಂ. ನಾಗಭೂಷಣ ಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜು, ಬಳ್ಳಾರಿ ತಾಲ್ಲೂಕು ಅಧಿಕಾರಿ ಗಾದಿಲಿಂಗಪ್ಪ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ, ಬಳ್ಳಾರಿ ತಾಲ್ಲೂಕು ವ್ಯವಸ್ಥಾಪಕ ರೇವಣ್ಣ ಸಿದ್ದಪ್ಪ, ಬಳ್ಳಾರಿ ತಾಪಂ ಇಓ ಶ್ರೀಧರ್ ಐ ಬಾರಿಕಾರ ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande