ವಿಜಯಪುರ, 21 ಜುಲೈ (ಹಿ.ಸ.) :
ಆ್ಯಂಕರ್ : ಇದು ಮೂರನೇ ಸಲ. ಅಂದ್ರೆ 18 ವರ್ಷ ನನ್ನ ಬಿಜೆಪಿಯಲ್ಲಿ ತೆಗೆದುಕೊಳ್ಳಬಾರದು ಎನ್ನುತ್ತಿದ್ದಾರೆ. ಆದ್ರೇ, ಇದೀಗ್ ನೋಡಿ ಎರಡು ತಿಂಗಳಲ್ಲಿ ಮತ್ತೆ ಮರಳಿ ನನ್ನ ಬಿಜೆಪಿಗೆ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ನನಗೆ ಸೂಚನೆ ಅಲ್ಲ. ಹಾಗೆ ಇದೆ ನಮ್ಮ ಶಕ್ತಿ. ಇದ್ರೆ ಎಲ್ಲರು ಕರೆಯುತ್ತಾರೆ. ಇಲ್ಲ ಅಂದ್ರೆ ಅಪ್ಪಾಜಿ ಅನ್ನುತ್ತ ಅವರ ಕೈ ಕಾಲು ಹಿಡಿಯಬೇಕಾಗುತ್ತದೆ ಎಂದರು.
ಅಲ್ಲದೇ, ಧರ್ಮಸ್ಥಳದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳ ಎಸ್‌ಐಟಿ ತನಿಖೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಎಸ್ ಐಟಿ ತನಿಖೆ ಮಾಡಲಿ. ನಾವು ಬೇಡ ಎಂದಿದ್ದೇವೆ. ಆದ್ರೇ, ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಟಾರ್ಗೆಟ್ ಮಾಡಿ ಮಾಡಿದ್ರೆ ನಾವು ಒಪ್ಪಲ್ಲ. ಈಗಾಗಲೇ ಅನೇಕ ಬಾರಿ ಇದರ ಬಗ್ಗೆ ಅವರು ಸ್ಪಷ್ಟಪಡಿಸಿದ್ದಾರೆ. ಸನಾತನ ಧರ್ಮ, ದೇವಸ್ಥಾನ, ಧರ್ಮಾಧಿಕಾರಿಗಳ ಬಗ್ಗೆ ಟಾರ್ಗೇಟ್ ಮಾಡಿದ್ರೆ ಸಹಿಸಲ್ಲ.
ನ್ಯಾಯ ಉಳಿದಿದ್ದೆ ಧರ್ಮಸ್ಥಳದಲ್ಲಿ, ನಮಗೇನಾದ್ರು ಆದ್ರೆ ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡ್ತೆವೆ ತಾನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande