ರೈತರು ಸುಮ್ನೆ ಕುಳಿತರೆ ಕೃಷಿ ಭೂಮಿ ಉಳಿಯುವುದಿಲ್ಲ: ಶಾಸಕ ದರ್ಶನ ಪುಟ್ಟಣ್ಣಯ್ಯ
ವಿಜಯಪುರ, 21 ಜುಲೈ (ಹಿ.ಸ.) : ಆ್ಯಂಕರ್ : ರೈತರ ಸಮಸ್ಯೆಗೆ ಪರಿಹಾರ ಸಿಗಬೇಕಂದರೆ,ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಧ್ವನಿ ಎತ್ತಿದಾಗ ಮಾತ್ರ ಪರಿಹಾರ ಕಂಡುಕೊಳ್ಳಬಹುದು ಎಂದು ಮೇಲುಕೋಟೆಯ ಶಾಸಕ ದರ್ಶನ ಪುಟ್ಟಣ್ಣಯ್ಯ ಹೇಳಿದರು. ಬಾಗಲಕೋಟೆ ಜ
ರೈತರು


ವಿಜಯಪುರ, 21 ಜುಲೈ (ಹಿ.ಸ.) :

ಆ್ಯಂಕರ್ : ರೈತರ ಸಮಸ್ಯೆಗೆ ಪರಿಹಾರ ಸಿಗಬೇಕಂದರೆ,ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಧ್ವನಿ ಎತ್ತಿದಾಗ ಮಾತ್ರ ಪರಿಹಾರ ಕಂಡುಕೊಳ್ಳಬಹುದು ಎಂದು ಮೇಲುಕೋಟೆಯ ಶಾಸಕ ದರ್ಶನ ಪುಟ್ಟಣ್ಣಯ್ಯ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಪು ಕೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತ ಹುತಾತ್ಮ ದಿನಾಚರಣೆ ಹಾಗೂ ದಿ: ಶ್ರೀಶೈಲ್ ನಾಯಕ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.

ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರ ಸಮಸ್ಯೆಗಳು ಹೆಚ್ಚಾಗಿವೆ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಸಾಲಗಾರರಾಗಿದ್ದಾರೆ. ಬೆಳೆಗೆ ಬೆಲೆ ನಿಗದಿಯಾಗಬೇಕು,ಕೇವಲ ರೈತ ಹುತಾತ್ಮ ದಿನದಂದು ಕೆಲಸ ಮಾಡಿದರೆ ಸಾಲದು. ಎಲ್ಲ ದಿನದಲ್ಲಿ ಕೆಲಸ ಮಾಡಬೇಕು ಎಂದರು.

ದಿ ಶ್ರೀಶೈಲ ನಾಯಕ್ ಅವರು ಈ ಜಿಲ್ಲೆಯ ಅನೇಕ ಸಮಸ್ಯೆಗಳನ್ನು ತೆಗೆದುಕೊಂಡು ನಿರಂತರವಾಗಿ ಹೋರಾಟ ಮಾಡುತ್ತಿದ್ದರು,ಅನೇಕ ಬಾರಿ ಬೆಂಗಳೂರಿಗೆ ಬಂದು ಈ ಜಿಲ್ಲೆಯ ಸಮಸ್ಯೆಗಳ ಕುರಿತು ನನ್ನ ಜೊತೆಯಲ್ಲಿ ಚರ್ಚಿಸಿದ್ದಾರೆ ಅಂತಹ ವಿಶಾಲ ಮನೋಭಾವನೆ ಹೊಂದಿದವರು ಶ್ರೀಶೈಲ್ ನಾಯಕ,ಅವರ ಆದರ್ಶಗಳನ್ನ ಇಟ್ಟುಕೊಂಡು ಸಂಘಟನೆಯನ್ನು ಉನ್ನತ ಮಟ್ಟಕ್ಕೆ ಬೆಳೆಸೋಣ ಎಂದರು.

ರೈತರು ಸುಮ್ನೆ ಕುಳಿತರೆ ಕೃಷಿ ಭೂಮಿ, ಮಾರುಕಟ್ಟೆ ಉಳಿಯುವುದಿಲ್ಲ, ಬಹುರಾಷ್ಟ್ರೀಯ ಕಂಪನಿಗೆ ಫಲವತ್ತಾದ ಭೂಮಿಯನ್ನು ಒದಗಿಸುವಂತಹ ಕಾನೂನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಿಂಬಾಗಿಲಿನಿಂದ ಜಾರಿಗೆತರುತ್ತಿದೆ ಪ್ರತಿ ವರ್ಷ ರೈಲು,ವಿಮಾನ ನಿಲ್ದಾಣ,ಕೈಗಾರಿಕೆಗಳು ಹಾಗೂ ರಸ್ತೆಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದರು.

ರೈತರು ಹೋರಾಟಕ್ಕೆ ಇಳಿಯದಿದ್ದರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ, ಸರ್ಕಾರ ರೈತರ ಹೆಸರು ಹೇಳಿ ಬಜೆಟ್ ನಲ್ಲಿ ಹಣ ಒದಗಿಸಿ,ರೈತರಿಗೆ ಹಣ ಮುಟ್ಟಿಸದೆ ತಮ್ಮ ಜೇಬಿಗೆ ಇಳಿಸಿಕೊಳ್ಳುವ ವ್ಯವಸ್ಥೆ ನಡೆದಿದೆ, ಪ್ರತಿ ಚುನಾವಣೆಯಲ್ಲಿ ರೈತರಿಗೆ ಮೋಸ ಆಗುತ್ತಿದೆ,ಇನ್ನುವರೆಗೂ ರೈತರಿಗೆ ತಿಳುವಳಿಕೆ ಬಂದಿಲ್ಲ,ಈ ಜಿಲ್ಲಾ ಸಮಿತಿಗಳನ್ನ ರಚನೆ ಮಾಡಿ ಶ್ರೀಶೈಲ ನಾಯಕ್ ಅವರ ಅಶ್ವತ್ಥರಗಳನ್ನ ಈಡೇರಿಸಿದಾಗ ಮಾತ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಾಗೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande