ಗದಗ, 21 ಜುಲೈ (ಹಿ.ಸ.) :
ಆ್ಯಂಕರ್: ಇತಿಹಾಸ ಪ್ರಸಿದ್ಧ ನರಗುಂದ ರೈತ ಬಂಡಾಯದ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ವೀರಪ್ಪ ಕಡ್ಲಿಕೊಪ್ಪ ಅವರ ಸ್ಮರಣಾರ್ಥ ಪುತ್ಥಳಿ ಹಾಗೂ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಸಚಿವ ಹೆಚ್.ಕೆ. ಪಾಟೀಲ ತಿಳಿಸಿದ್ದಾರೆ.
ನರಗುಂದದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಡಾಯದಲ್ಲಿ ತಮ್ಮ ಜೀವ ತ್ಯಾಗ ಮಾಡಿದ ರೈತ ವೀರಪ್ಪ ಕಡ್ಲಿಕೊಪ್ಪ ಅವರ ಹೆಸರಿನಲ್ಲಿ ಪುತ್ಥಳಿ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಭೂಮಿಯನ್ನು ದಾನವಾಗಿ ಪಡೆದು ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ ವರ್ಷದೊಳಗೆ ಪುತ್ಥಳಿ ಹಾಗೂ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ, ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಮಹದಾಯಿ ಕಳಸಾ-ಬಂಡೂರಿ ಯೋಜನೆ ಇನ್ನೂ ಜಾರಿಗೆ ಬರದಿರುವುದು ದೊಡ್ಡ ಅನ್ಯಾಯ ಎಂದು ಹೇಳಿದ ಸಚಿವರು, “ಪರಿಸರ ಇಲಾಖೆಯಿಂದ ತಕ್ಷಣ ಅನುಮತಿ ನೀಡಬೇಕೆಂದು ನಾವು ಕೇಳುತ್ತೇವೆ. ರೈತರಿಗೆ ನಡೆಯುತ್ತಿರುವ ಅನ್ಯಾಯ ಇದೀಗ ಸಹಿಸಲಾಗದ ಮಟ್ಟಿಗೆ ತಲುಪಿದೆ,” ಎಂದು ಎಚ್ಚರಿಸಿದರು.
ಅಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆಯ (ಬ್ರಿಜೇಶ್ ಕುಮಾರ್ ಟ್ರಿಬುನಲ್) ತೀರ್ಪು ಈಗಾಗಲೇ 11 ವರ್ಷಗಳ ಹಿಂದೆ ಸಲ್ಲಿಕೆಯಾಗಿದರೂ ಕೇಂದ್ರ ಸರ್ಕಾರ ಇದನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿಲ್ಲ ಎಂಬುದನ್ನು ಪಾಟೀಲ ಗಮನಿಸಿದರು.
“ಇಂಟರ್ ಸ್ಟೇಟ್ ವಾಟರ್ ವಿವಾದ ಕಾಯ್ದೆಯ ಸೆಕ್ಷನ್ 6(1) ಪ್ರಕಾರ ಕೇಂದ್ರ ಸರ್ಕಾರ ಈ ತೀರ್ಪನ್ನು ಅಧಿಕೃತಗೊಳಿಸಬೇಕು. ನಾವು 133 ಟಿಎಂಸಿ ನೀರನ್ನು ಬಳಸಿಕೊಳ್ಳುತ್ತಿದ್ದರೂ, ಅದು ನಮ್ಮ ಹಕ್ಕಿನ ನೀರು ಎಂಬುದಾಗಿ ಮನವರಿಕೆ ಮಾಡಿಕೊಡಲಾಗುತ್ತಿಲ್ಲ. ಇದು ದಶಕಗಳ ಕಾಲ ಮುಂದುವರೆದ ನೈಜ ಅನ್ಯಾಯ,” ಎಂದು ಅವರು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ತಕ್ಷಣ ಕೆಯುಡ್ಲೂಡಿಟಿ
ತೀರ್ಪನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕು ಎಂಬುದಾಗಿ ಒತ್ತಾಯಿಸಿದ ಸಚಿವರು, ರೈತರು ಹಾಗೂ ರಾಜ್ಯದ ನೀರಿನ ಹಕ್ಕಿಗಾಗಿ ಹೋರಾಟ ಮುಂದುವರಿಯಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Lalita Manjunath Pattar