ಬೇವೂರು ಸ್ಟೇಷನ್ : ಜುಲೈ 22 - ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಕೊಪ್ಪಳ, 21 ಜುಲೈ (ಹಿ.ಸ.) : ಆ್ಯಂಕರ್ : ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ ಬೇವೂರು ಸ್ಟೇಷನ್‌ನ ನಿರ್ವಹಣೆ ಕಾಮಗಾರಿ ನಡೆಸುತ್ತಿರುವ ಪ್ರಯುಕ್ತ ಜುಲೈ 22 ರಂದು 10 ಗಂಟೆಯಿ0ದ ಸಾಯಂಕಾಲ 5 ಗಂಟೆಯವರೆಗೆ ಸ್ಟೇಷನ್‌ಗೆ ಒಳಪಡುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಫ್-1 ವೆಂಕಟಾಪೂರ,
ಬೇವೂರು ಸ್ಟೇಷನ್ : ಜುಲೈ 22 - ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ


ಕೊಪ್ಪಳ, 21 ಜುಲೈ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ ಬೇವೂರು ಸ್ಟೇಷನ್‌ನ ನಿರ್ವಹಣೆ ಕಾಮಗಾರಿ ನಡೆಸುತ್ತಿರುವ ಪ್ರಯುಕ್ತ ಜುಲೈ 22 ರಂದು 10 ಗಂಟೆಯಿ0ದ ಸಾಯಂಕಾಲ 5 ಗಂಟೆಯವರೆಗೆ ಸ್ಟೇಷನ್‌ಗೆ ಒಳಪಡುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಎಫ್-1 ವೆಂಕಟಾಪೂರ, ಎಫ್-2 ಮೆತಗಲ್, ಎಫ್-3 ಹಿರೇಸೂಳಿಕೇರಿ, ಎಫ್-4 ಹಾಸಗಲ್, ಎಫ್-5 ಶಿಡಗನಹಳ್ಳಿ, ಎಫ್-7 ಕೊಡದಾಳ, ಎಫ್-8 ಚಿಲಕಮುಖಿ, ಎಫ್-9 ಇರಕಲಗಡಾ, ಎಫ್-10 ಗೋಸಲದೊಡ್ಡಿ, ಎಫ್-11 ಜಿನ್ನಾಪೂರ ಈ ಎಲ್ಲಾ ಫೀಡರಗಳ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.

ವಿದ್ಯುತ್ ನಿರ್ವಹಣಾ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂನ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande