ದೀರ್ ಅಲ್-ಬಲಾಹ್, 21 ಜುಲೈ (ಹಿ.ಸ.) :
ಆ್ಯಂಕರ್ : ಗಾಜಾದಲ್ಲಿ ಜನರು ಆಹಾರ ಪದಾರ್ಥಗಳನ್ನು ಪಡೆಯಲು ಜಮಾಯಿಸಿದ್ದ ವೇಳೆ ನಡೆದ ಶೆಲ್ ದಾಳಿಯಲ್ಲಿ ಕನಿಷ್ಠ 85 ಪ್ಯಾಲೆಸ್ಟೀನಿಯನ್ನರು ಭಾನುವಾರ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ. ಇದರಲ್ಲಿ ಉತ್ತರ ಗಾಜಾದ ಜಿಕಿಮ್ ಕ್ರಾಸಿಂಗ್ ಬಳಿ ಮಾತ್ರವೇ 79 ಸಾವುಗಳು ಸಂಭವಿಸಿದ್ದು, ಯುಎನ್ ಆಹಾರ ಟ್ರಕ್‌ಗಳು ಆಗಮಿಸಿದ ವೇಳೆ ಈ ಘಟನೆ ನಡೆದಿದೆ.
ಈ ಮಧ್ಯೆ ಇಸ್ರೇಲ್ ಸೇನೆ, ಮಧ್ಯ ಗಾಜಾದ ಹಲವೆಡೆ ಸ್ಥಳಾಂತರ ಆದೇಶ ಹೊರಡಿಸಿದೆ. ಅನೇಕ ಎನ್‌ಜಿಓಗಳು ತಮ್ಮ ಕಚೇರಿಗಳನ್ನು ಖಾಲಿ ಮಾಡುವಂತೆ ಸೂಚನೆ ಪಡೆದಿವೆ. ರಫಾದ ಶಕೌಶ್ ಪ್ರದೇಶದಲ್ಲಿ 6 ಮತ್ತು ಖಾನ್ ಯೂನಿಸ್‌ನ ಆಶ್ರಯ ಶಿಬಿರದಲ್ಲಿ 7 ಜನರು ಮೃತಪಟ್ಟಿದ್ದಾರೆ. ಗಾಯಗೊಂಡವರ ಸಂಖ್ಯೆ 150 ಕ್ಕೂ ಹೆಚ್ಚಾಗಿದೆ.
ಇಸ್ರೇಲ್ ಸೇನೆ, ಜನಸಮೂಹದಿಂದ ಭದ್ರತೆಗೆ ಬೆದರಿಕೆ ಉಂಟಾಯಿತು ಎಂದು ಪ್ರತಿಕ್ರಿಯೆ ನೀಡಿದ್ದು, ಹಮಾಸ್ ಅವ್ಯವಸ್ಥೆ ಉಂಟುಮಾಡುತ್ತಿದೆ ಎಂದು ಆರೋಪಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa