ಗದಗ, 02 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಹಾಗೂ ಗದಗ ಕೆ.ಎಂ.ಎಫ್. ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ನರಗುಂದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಹಾಲು ಪರೀಕ್ಷಕರುಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜುಲೈ 2 ರಂದು ತಾಲೂಕ ಪಂಚಾಯತ ಸಭಾಭವನ, ನರಗುಂದ ತಾ.ನರಗುಂದ ಜಿ.ಗದಗ ಜರುಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಂಡಳ ನಿ., ಬೆಂಗಳೂರು ಇದರ ನಿರ್ದೇಶಕರಾದ ಎಚ್. ಜಿ. ಹಿರೇಗೌಡ್ರ ಅವರು ಜಾಗತಿಕ ಆಹಾರವಾಗಿರುವ ಹಾಲು ಮಹತ್ತರ ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರಾಟ ವ್ಯವಸ್ಥೆಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿರುವ ಹೈನೋದ್ಯಮದ ಕಾರ್ಯಚಟುವಟಿಕೆಗಳೊಂದಿಗೆ ಅದರ ಸಾಧನೆಗಳನ್ನು ವಿಶ್ವಕ್ಕೆ ತೋರಿಸುವ ಕನ್ನಡಿಯಂತೆ ಕೆ.ಎಂ.ಎಫ್ ಕಾರ್ಯನಿರ್ವಹಿಸುತ್ತಿದೆ ಸಹಕಾರ ಸಂಘಗಳಿಗೆ, ಕಟ್ಟಡಕ್ಕಾಗಿ ಬಡ್ಡಿರಹಿತ ಸಾಲ, ಆಕಳು ಸಾಲ 46000 ವರೆಗೆ ಹೆಚ್ಚಿಸಲಾಗಿದ್ದು, ಪ್ರಶಂಸಾರ್ಹವಾಗಿದೆ ಎಂದು ಹೇಳಿದರು. ಹೈನುಗಾರಿಕೆ ಆಧಾರಿತ 100 ಕೋಟಿಗೂ ಅಧಿಕ ಕೃಷಿಕ ಕುಟುಂಬಗಳ ಸಾಮಾಜಿಕ-ಆರ್ಥಿಕ ಸುಧಾರಣೆಯೊಂದಿಗೆ ಜಾಗತಿಕ ಆಹಾರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡಿರುವ ಕೆ.ಎಂ.ಎಫ್ ವಿಶ್ವ ಆಹಾರ ಸಂಸ್ಥೆ ಅಂತರಾಷ್ಟ್ರೀಯ ಹೈನೋದ್ಯಮ ಮಹಾಮಂಡಳ ಹಾಗೂ ಸದಸ್ಯ ರಾಷ್ಟçಗಳ ಸಹಯೋಗದಲ್ಲಿ ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಇಂತಹ ಮಹತ್ತರ ಯೊಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪ್ರತಿ ವರ್ಷವೂ ಒಂದೂಂದು ವಿಶಿಷ್ಟ ಮತ್ತು ವಿಭಿನ್ನ ಥೀಮ್ ನೋಂದಿಗೆ ವಿಶ್ವ ಹಾಲು ದಿನಾಚರಣೆ ಆಯೊಜಿsಸುತ್ತಾ ಬರುತ್ತಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಿ. ಟಿ. ಕಳಸದ ರವರು ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿಯೂ ಇಂದು ಆಧುನಿಕ ತಂತ್ರಜ್ಞಾನವನ್ನು ಎಲ್ಲಾ ಹಂತಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದು, ತಳಿ ಅಭಿವೃದ್ಧಿ, ಹಸಿರು ಮೇವು ಮತ್ತು ಸಮತೋಲಿನ ಪಶು ಆಹಾರ ಉತ್ಪಾದನೆ, ಪಶು ವೈದ್ಯಕೀಯ ಸೇವೆ, ಹಾಲು ಶೇಖರಣೆ ಹೀಗೆ ಎಲ್ಲಾ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ವಿಸ್ತರಿಸಿಕೊಳ್ಳಲಾಗಿದೆ. ಇನ್ನು ಹಾಲನ್ನು ಶೇಖರಿಸಿದ ನಂತರ ಅದರ ಸಂಸ್ಕರಣೆ, ಹಾಲಿನ ಉತ್ಪನ್ನಗಳೊಂದಿಗೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿಯೂ ತಂತ್ರಜ್ಞಾನವನ್ನು ಡೇರಿ ಕ್ಷೇತ್ರವು ಅಳವಡಿಸಿಕೊಂಡಿದೆ. ಇತ್ತೀಚಿನ ಪ್ರವರ್ಧಮಾನಕ್ಕೆ ಬರುತ್ತಿರುವ ಕೃತಕ ಬುದ್ದಿಮತ್ತೆ ತಂತ್ರಜ್ಞಾನದತ್ತಲೂ ಗಮನ ಹರಿಸಿರುವ ಹೈನೋದ್ಯಮ ಕ್ಷೇತ್ರವು ತನ್ನ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಂಡು ಉತ್ಪಾದನಾ ಮತ್ತು ಅನಗತ್ಯ ವೆಚ್ಚಗಳನ್ನು ತಯಾರಿಸುವಲ್ಲಿ ಯಶಸ್ಸು ಕಂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇದರ ಉಪಾಧ್ಯಕ್ಷರಾದ ವಾಯ್. ಎಫ್. ಪಾಟೀಲರವರು ವಹಿಸಿ ಮಾತನಾಡುತ್ತಾ ವಿಶ್ವವನ್ನು ಸುಲಲಿತ ಮತ್ತು ಸುಲಭ ಕಾರ್ಯನಿರ್ವಹಣೆಯತ್ತ ಕರೆದೊಯ್ಯುತ್ತಿರುವ ಡಿಜಿಟಲ್ ತಂತ್ರಜ್ಞಾನವು ಇತರೆ ಕ್ಷೇತ್ರಗಳಂತೆಯೇ ಹೈನೋದ್ಯಮ ಕ್ಷೇತ್ರಕ್ಕೂ ವರವಾಗಿ ಪರಿಣಮಿಸಿದೆ. ರೈತರು ಉತ್ಪಾದಿಸುವ ಹಾಲಿನ ಪರೀಕ್ಷೆ, ದಾಖಲೆ ಸಂಗ್ರಹದಿಂದ ಆರಂಭವಾಗಿ ರೈತರಿಗೆ ಹಣ ಪಾವತಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಂತಿಮ ಗ್ರಾಹಕರಿಗೆ ಮಾರಾಟ ಮಾಡುವ ಪ್ರಕ್ರಿಯೆವರೆಗೆ ಈ ಡಿಜಿಟಲ್ ತಂತ್ರಜ್ಞಾನದ ಕಾರ್ಯಚಟುವಟಿಕೆ ವಿಸ್ತರಿಕೊಂಡಿದೆ. ಕೆ.ಎಂ.ಎಫ್ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಪ್ರಶಂಸಾರ್ಹ ಸಾಧನೆಯನ್ನು ದಾಖಲಿಸುತ್ತಿದೆ. 25 ಲಕ್ಷ ರೈತ ಕುಟುಂಬಗಳಿಗೆ (ಹಾಲು ಉತ್ಪಾದಕರಿಗೆ) ಆಶ್ರಯ ನೀಡಿ ದಿನಂಪ್ರತಿ ಸುಮಾರು 1 ಕೋಟಿ ಲೀಟರ್ ಹಾಲನ್ನು ಸಂಗ್ರಹಿಸಿ, ವಿತರಿಸಿ, ರೂಪಾಂತರಿಸಿ ಲಾಭದಾಯಕವಾಗಿ ಮುನ್ನಡೆದು ಸಾರ್ವತ್ರಿಕ ಅಭಿನಂದನೆಗೆ ಪಾತ್ರವಾಗಿದೆ. ಕೆ.ಎಂ.ಎಫ್ ನ ಆಡಳಿತ ದಕ್ಷತೆ ಶಿಸ್ತು, ಸಹಕಾರಿ ತತ್ವದಲ್ಲಿ ನಂಬಿಕೆ ವಿಶ್ವಾಸ ಅದರ ಸಾಧನೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕಿಯರಾದ ಶ್ರೀಮತಿ ಎಸ್. ಎಸ್. ಕಬಾಡೆ ಯವರು ಸಹಕಾರ ಸಹಕಾರ ಸಂಘಗಳ ಸಹಾಯಕ ನಿಬಂಧಕಿಯರಾದ ಶ್ರೀಮತಿ ಪುಷ್ಪಾ ಕೆ. ಕಡಿವಾಳ, ನರಗುಂದ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ ನವಲಗುಂದ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾಧ ಪ್ರಸನ್ನ ಪಟ್ಟೇದ, ನರಗುಂದ ತಾಲೂಕಿನ ವಿಸ್ತರಣಾಧಿಕಾರಿಗಳಾದ ದಿಲೀಪ್ ಆಯ್. ನದಾಫ ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಮಾರುಕಟ್ಟೆಯ ಮೇಲೆ ಹಾಲಿನ ಗುಣಮಟ್ಟ ಪ್ರಬಾವ ಕುರಿತು. ಡಾ. ವೀರೇಶ ತರಲಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು, ಧಾರವಾಡ ಹಾಲು ಒಕ್ಕೂಟ, ಧಾರವಾಡ, ಶುದ್ದ ಹಾಗೂ ಅಧಿಕ ಹಾಲು ಉತ್ಪಾದನೆ ಮತ್ತು ಅಘೋಚರ ಕೆಚ್ಚಲುಬಾವು ಕುರಿತು ಡಾ. ಎಂ. ಬಿ. ಮಡಿವಾಳರ ನಿವೃತ್ತ ಜಂಟಿ ನಿರ್ದೇಶಕರು, ಕ.ಹಾ.ಮ. ತರಬೇತಿ ಕೇಂದ್ರ ರಾಯಾಪೂರ, ಧಾರವಾಡ, ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು ಎಂ. ಬಿ. ಪಾಟೀಲ ನಿವೃತ್ತ ಸಹಾಯಕ ವ್ಯವಸ್ಥಾಪಕರು, ಧಾರವಾಡ ಹಾಲು ಒಕ್ಕೂಟ, ಧಾರವಾಡ ಉಪನ್ಯಾಸವನ್ನು ನಿಡಿದರು.
ಪ್ರಾರಂಭದಲ್ಲಿ ಹುಣಸಿಕಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಾದ ಎಸ್. ಎಸ್. ಹುಚ್ಚನಗೌಡ್ರ ಇವರು ಪ್ರಾರ್ಥನೆ ಮಾಡಿದರು ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಇವರು ಸ್ವಾಗತಿಸಿ ನಿರೂಪಿಸಿದರು ನಂತರ ವಿಸ್ತರಣಾಧಿಕಾರಿಗಳಾದ ದಿಲೀಪ್ ಆಯ್. ನದಾಫ ಇವರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / Lalita MP