ಬಳ್ಳಾರಿ : ವಿಶ್ವ ಮಧ್ವ ಮಹಾಪರಿಷತ್ತಿನಿಂದ ಸೌರಭ ದಾಸ ಸಾಹಿತ್ಯ ಪರೀಕ್ಷೆ
ಬಳ್ಳಾರಿ, 02 ಜುಲೈ (ಹಿ.ಸ.) : ಆ್ಯಂಕರ್ : ವಿಶ್ವ ಮಧ್ವ ಮಹಾ ಪರಿಷತ್ತಿನ `ಸೌರಭ ದಾಸ ಸಾಹಿತ್ಯ'' ವಿದ್ಯಾಲಯದ ಪರೀಕ್ಷೆಗಳು ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಾಗೂ ಶ್ರೀ ರಕ್ಷೋಭುವನ ನರಸಿಂಹ ದೇವರ ದೇವಾಲಯದ ಸಭಾಂಗಣದಲ್ಲಿ ಎರೆಡು ದಿನಗಳ ಕಾಲ ನಡೆದವು. ಶ್ರೀರಕ್ಷ
ಬಳ್ಳಾರಿ : ವಿಶ್ವ ಮಧ್ವ ಮಹಾಪರಿಷತ್ತಿನಿಂದ ನಡೆದ ಸೌರಭ ದಾಸ ಸಾಹಿತ್ಯ ಪರೀಕ್ಷೆಗಳು


ಬಳ್ಳಾರಿ, 02 ಜುಲೈ (ಹಿ.ಸ.) :

ಆ್ಯಂಕರ್ : ವಿಶ್ವ ಮಧ್ವ ಮಹಾ ಪರಿಷತ್ತಿನ `ಸೌರಭ ದಾಸ ಸಾಹಿತ್ಯ' ವಿದ್ಯಾಲಯದ ಪರೀಕ್ಷೆಗಳು ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಾಗೂ ಶ್ರೀ ರಕ್ಷೋಭುವನ ನರಸಿಂಹ ದೇವರ ದೇವಾಲಯದ ಸಭಾಂಗಣದಲ್ಲಿ ಎರೆಡು ದಿನಗಳ ಕಾಲ ನಡೆದವು.

ಶ್ರೀರಕ್ಷೋಭುವನ ದೇವಸ್ಥಾನದ ಪ್ರಧಾನ ಅರ್ಚಕರಾದ ಪಂಡಿತ ಗುರುರಾಜಾಚಾರ್ಯ ಅವರು, ವಿಶ್ವ ಮಧ್ವ ಮಹಾ ಪರಿಷತ್ತಿನ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಸಂಸ್ಥಾಪಕರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ವಿಶೇಷ ಅನುಗ್ರಹದಿಂದ ಈ ಪರೀಕ್ಷೆಗಳು ಒಂಭತ್ತು ವರ್ಷಗಳಿಂದ ಯಶಸ್ವಿಯಾಗಿ ನೆರವೇರಿವೆ ಎಂದರು.

ಈ ವಿದ್ಯಾಲಯದಿಂದ `ದಾಸ ,ದಾಸಶ್ರಿ, ದಾಸನಿಧಿ, ದಾಸರತ್ನ ದಾಸ ಶಿರೋಮಣಿ, ದಾಸ ದರ್ಶನ, ದಾಸ ಸಾಗರ

ದಾಸ ಭಾವ ಹಾಗೂ ದಾಸ ಮಾಣಿಕ್ಯ' ಎಂಬ 9 ವರ್ಗಗಳಲ್ಲಿ ಅಭ್ಯಾಸ ಮತ್ತು ಪರೀಕ್ಷೆಗಳು ನಡೆದಿವೆ. ಕೊಪ್ಪಳ ಜಿಲ್ಲೆಯ ಹನುಮಸಾಗರದ ಪಂಡಿತ ಪ್ರಮೋದಾಚಾರ್ ಪೂಜಾರ್ ಅವರು, ಪರೀಕ್ಷೆಗಳ ಮುಂದಾಳತ್ವ ವಹಿಸಿ ಅಧ್ಯಯನಕ್ಕೆ ಬೇಕಾದ ಸಾಹಿತ್ಯವನ್ನು - ದಾಸ ಸಾಹಿತ್ಯದ ಪ್ರಚಾರಕ್ಕೆ ಬೇಕಾದ ನೆರವನ್ನು ನೀಡುತ್ತಿದ್ದಾರೆ ಎಂದರು.

ಶ್ರೀ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ಪಂಡಿತ ಪ್ರಸನ್ನಾಚಾರ್ಯ ಅವರು, ಸೌರಭ ದಾಸ ಸಾಹಿತ್ಯ ವಿದ್ಯಾಲಯದ 113 ಕೇಂದ್ರಗಳಲ್ಲಿ 15 ಸಾವಿರ ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುತ್ತಿದ್ದಾರೆ. ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಮಹತ್ಕಾರ್ಯ ಶ್ಲಾಘನೀಯ ಎಂದರು.

ಶ್ರೀ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಬಳ್ಳಾರಿ ಸಂಚಾಲಕಿ ಸೌಭಾಗ್ಯ ಕಾವಿ ಅವರು ಉಪಸ್ಥಿತರಿದ್ದರು. ವಿಠಲ್ ದೇಸಾಯಿ ಅವರು ಕಾರ್ಯಕ್ರಮ ನಿರ್ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande