ರಾಯಚೂರು : ಶಕ್ತಿನಗರದ ಕೆಪಿಸಿಯ ಟೇಕ್ನಿಷಿಯನ್ ಕಾಣೆ
ರಾಯಚೂರು, 02 ಜುಲೈ (ಹಿ.ಸ.) : ಆ್ಯಂಕರ್ : ತಾಲೂಕಿನ ಶಕ್ತಿನಗರ ಪೊಲೀಸ ಠಾಣೆಯ ವ್ಯಾಪ್ತಿಯ ಪಾರ್ವತಿ ನಗರದ ನಿವಾಸಿ ಜಮಶೇರ್ ಅಲಿ ತಂದೆ ಅಕ್ಬರ್ ಸಾಬ್ (35) ಜೂನ್ 20ರಂದು ಕೆಪಿಸಿ ಕಾಲೋನಿಯಲ್ಲಿರುವ ತನ್ನ ತಾಯಿಯನ್ನು ಮಾತನಾಡಿಸಿಕೊಂಡು, ಮನೆಗೆ ನೀರು ತರುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆ
ರಾಯಚೂರು  : ಶಕ್ತಿನಗರದ ಕೆಪಿಸಿಯ ಟೇಕ್ನಿಷಿಯನ್ ಕಾಣೆ


ರಾಯಚೂರು, 02 ಜುಲೈ (ಹಿ.ಸ.) :

ಆ್ಯಂಕರ್ : ತಾಲೂಕಿನ ಶಕ್ತಿನಗರ ಪೊಲೀಸ ಠಾಣೆಯ ವ್ಯಾಪ್ತಿಯ ಪಾರ್ವತಿ ನಗರದ ನಿವಾಸಿ ಜಮಶೇರ್ ಅಲಿ ತಂದೆ ಅಕ್ಬರ್ ಸಾಬ್ (35) ಜೂನ್ 20ರಂದು ಕೆಪಿಸಿ ಕಾಲೋನಿಯಲ್ಲಿರುವ ತನ್ನ ತಾಯಿಯನ್ನು ಮಾತನಾಡಿಸಿಕೊಂಡು, ಮನೆಗೆ ನೀರು ತರುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಶಕ್ತಿನಗರ ಠಾಣೆಯಲ್ಲಿ ಗುನ್ನೆ ಸಂಖ್ಯೆ: 38/2025 ಕಲಂರಡಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯು ಶಕ್ತಿನಗರದ ಕೆಪಿಸಿಯಲ್ಲಿ ಟೇಕ್ನಿಷಿಯನ್ ಆಗಿ ಕಾರ್ಯನಿವರ್ಹಿಸುತ್ತಿದ್ದ

.

ಕಾಣೆಯಾದ ವ್ಯಕ್ತಿಯ ಚಹರೆ: 35 ವರ್ಷ, 5.8ಫೀಟ್ ಎತ್ತರ, ಕೆಂಪು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಹಿಂದಿ, ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾನೆ.

ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಶಕ್ತಿನಗರ ಪೊಲೀಸ್ ಠಾಣೆ ಪಿಎಸ್‍ಐ ಮೊಬೈಲ್ ಸಂಖ್ಯೆ: 9480803868, ಸಿಪಿಐ ಗ್ರಾಮೀಣ ವೃತ್ತ ಮೊಬೈಲ್ ಸಂಖ್ಯೆ: 9480803832, ಡಿಎಸ್ಪಿ ಮೊಬೈಲ್ ಸಂಖ್ಯೆ: 9480803820, ರಾಯಚೂರು ಕಂಟ್ರೋಲ್ ರೂಮ್ ಸಂಖ್ಯೆ: 08532-235635ಗೆ ಸಂಪರ್ಕಿಸುವಂತೆ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande