ಚಿಕ್ಕಬಳ್ಳಾಪುರ , 02 ಜುಲೈ (ಹಿ.ಸ.) :
ಆ್ಯಂಕರ್ : ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿ ಗ್ರಾಮದ 11ನೇ ಶತಮಾನದಲ್ಲಿ ಚೋಳ ರಾಜರಿಂದ ನಿರ್ಮಾಣವಾದ ಸುಪ್ರಸಿದ್ಧ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಸಚಿವರಾದ ಎನ್. ಎಸ್. ಬೋಸರಾಜು ಅವರು ಹಾಗೂ ಸಹಕಾರ ಇಲಾಖೆಯ ಸಚಿವರಾದ ಕೆ.ಎನ್. ರಾಜಣ್ಣ ಅವರು ಭೇಟಿ ನೀಡಿ ನಾಡಿನ ಸಮಸ್ತ ಜನರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಕರ್ನಾಟಕ ಸರ್ಕಾರದ 2025 ರ 13 ನೇ ಸಚಿವ ಸಂಪುಟದ ಸಭೆಯ ನಿಮಿತ್ಯ ತೆರಳಿದವರು ಐತಿಹಾಸಿಕ ದೇವಸ್ಥಾನವಾದ ನಂದಿಗಿರಿ ಭೋಗನಂದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು ನಂತರ ದೇವಸ್ಥಾನ ಹಾಗೂ ಗತವೈಭವ ಸಾರುವ ಐತಿಹಾಸಿಕ ಕಟ್ಟಡಗಳನ್ನು, ನೀರಿನ ಕೊಳವನ್ನು ವೀಕ್ಷಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್